Monday, January 26, 2026

ವಿದ್ಯುತ್ ಆಘಾತಕ್ಕೆ ಮಹಿಳೆ ಬಲಿ

ಬಂಟ್ವಾಳ, ಆ. ೩: ವಿದ್ಯುತ್ ಅಘಾತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿನ ಜನತಾ ಗೃಹ ನಿವಾಸಿ ವಿಶ್ವನಾಥ ಬಂಗೇರ ಎಂಬವರ ಪತ್ನಿ ಗೀತಾ (೫೪) ಮೃತ ಮಹಿಳೆ.
ಇವರು ಮನೆಯ ಕೊಟ್ಟಿಗೆಯಲ್ಲಿ ಕಟ್ಟಿದ್ದ ತಂತಿಯ ಮೇಲೆ ಬಟ್ಟೆಯನ್ನು ಒಣಗಲು ಹಾಕಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದೆ‌. ವಿದ್ಯುತ್ ಅಘಾತಕ್ಕೊಳಗಾಗಿ ಅಸ್ವಸ್ಥರಾಗಿದ್ದ ಇವರು ತುಂಬೆ ಆಸ್ಪತ್ರೆಗೆ ಸಾಗಿಸಿದ್ದು, ಮೃತಪಟ್ಟಿರುವ ಬಗ್ಗೆ ಇಲ್ಲಿನ ವೈದ್ಯರು ದೃಢಪಡಿಸಿದರು.
ಈ‌ ಸಂಬಂಧ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

More from the blog

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು – ವಜ್ರದೇಹಿ ಶ್ರೀ

ವಿಟ್ಲ: ಹಿಂದು ಸಮಾಜ ಪ್ರಸಕ್ತ ಪರಿಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಜಾತಿ ಸಮುದಾಯಗಳು ಒಟ್ಟಾಗಿ ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು. ಹೀಗಾದಾಗ ಮಾತ್ರ ರಾಜಕೀಯ ಷಡ್ಯಂತ್ರಗಳನ್ನು ಮೆಟ್ಟಿ ಮುನ್ನಡೆಯ...