*ವಿದ್ಯುತ್ ಶಾಕ್ : ಕರೋಪಾಡಿ ಯುವಕ ಸಾವು*


ವಿಟ್ಲ : ಕರೋಪಾಡಿ ಗ್ರಾಮದ ಮಿತ್ತನಡ್ಕದಲ್ಲಿ ಎಡ್ಜ್ ಫ್ಯೂಸ್ ಹಾಕಲೆಂದು ವಿದ್ಯುತ್ ಪರಿವರ್ತಕಕ್ಕೇರಿದ ಯುವಕ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿದ ಘಟನೆ ಮಂಗಳವಾರ ಸಂಭವಿಸಿದೆ.
ಕರೋಪಾಡಿ ಗ್ರಾಮದ ಕುರೋಡಿ ಫೆಲಿಕ್ಸ್ ಮೊಂತೆರೊ(39) ಸಾವನ್ನಪ್ಪಿದವರು.
ಮೆಸ್ಕಾಂ ಗುತ್ತಿಗೆ ಆಧಾರದ ನೌಕರರಾದ ಇವರು ( ಮೂರು ತಿಂಗಳ ಗುತ್ತಿಗೆ) ಇವತ್ತು ಕೆಲಸಕ್ಕೆ ಹಾಜರಾಗಿರಲಿಲ್ಲ. ಹೈಟೆನ್ಶನ್ ಲೈನ್ ಸ್ವಿಚ್ ಆಫ್ ಮಾಡಿದ್ದರೂ ಒಂದು ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತು. ಇದನ್ನು ಗಮನಿಸದ ಫೆಲಿಕ್ಸ್ ಅವರು ಎಡ್ಜ್ ಫ್ಯೂಸ್ ಹಾಕಲೆತ್ನಿಸಿದಾಗ ವಿದ್ಯುತ್ ಶಾಕ್ ಬಡಿದಿದೆ. ಅವರು ವಿದ್ಯುತ್ ಪರಿವರ್ತಕದಿಂದ ಎಸೆಯಲ್ಪಟ್ಟು ಕೆಳಗೆ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ಒಯ್ಯುವ ಮುನ್ನವೇ ಅವರು ಕೊನೆಯುಸಿರೆಳೆದರು ಎಂದು ಸ್ಥಳೀಯರು ತಿಳಿಸಿದ್ದಾರೆ.