ಬಂಟ್ವಾಳ: ಪೋಲೀಸ್ ವಶದಲ್ಲಿರುವಾಗಲೇ ಆರೋಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಪ್ರಕರಣ ಸಿ.ಒ.ಡಿ.ತನಿಖೆಗೆ.


ಪತ್ನಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಮೇಲಿಂದ ನದಿಗೆ ಆರೋಪಿ ಜಿಗಿದು ಮೃತಪಟ್ಟ ಪ್ರಕರಣ ಸಿ.ಒ.ಡಿ.ತನಿಖೆ ಮಾಡುವಂತೆ ಸರಕಾರ ಅದೇಶ ನೀಡಿದೆ.
ಸರಕಾರದ ಆದೇಶದ ಮೇಲೆ ಸಿ.ಒ.ಡಿ.ಪೋಲೀಸರು ಬಂದರು ಠಾಣೆಗೆ ಅಗಮಿಸಿ ದೂರುದಾರರು ಮತ್ತು ಪೋಲೀಸರ ತನಿಖೆ ಆರಂಬಿಸಿದ್ದಾರೆ.
ಘಟನೆಯ ವಿವರ : ಮಂಗಳೂರಿನ ಕುದ್ರೋಳಿ ನಿವಾಸಿ ಮುನೀರ್ (42) ಎಂಬಾತ ಪತ್ನಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರು ಪೋಲೀಸರು ಪೊಲೀಸ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಮೇಲಿಂದ ನದಿಗೆ ಆರೋಪಿ ಜಿಗಿದು ಮೃತಪಟ್ಟಿದ್ದ.
ಮುನೀರ್ ತನ್ನ ಪತ್ನಿ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ನೀಡಿದ್ದರು. ಆರೋಪಿಯು ಆಟೋ ರಿಕ್ಷಾವೊಂದರಲ್ಲಿ ಹಳೆಯಂಗಡಿ ಸಮೀಪ ಬರುತ್ತಿದ್ದ ವೇಳೆ ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ಅದೇ ಆಟೋದಲ್ಲಿ ಮಂಗಳೂರಿನ ಬಂದರು ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ಮೂತ್ರ ಬಂದಿದೆ.
ಕೆಳಗಿಳಿಯಬೇಕು ಎಂದು ಹೇಳಿದ್ದಾನೆ. ಆಟೋದಿಂದ ಕೆಳಗಿಳಿದ ತಕ್ಷಣವೇ ಆರೋಪಿ ಸೇತುವೆ ಮೇಲಿಂದ ನದಿಗೆ ಹಾರಿದ್ದಾನೆ.
ಸೇತುವೆಯಿಂದ ಜಿಗಿದಿದ್ದ ವ್ಯಕ್ತಿಯ ಮೃತದೇಹ ಬೆಂಗ್ರೆ ಬಳಿ ಪತ್ತೆಯಾಗಿದ್ದು, ಪಣಂಬೂರು ಪೊಲೀಸರು ಮಹಜರು ನಡೆಸಿದ್ದರು.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಮೃತನ ಮರಣೋತ್ತರ ಪರೀಕ್ಷೆ ಹಾಗೂ ಪ್ರಕರಣ ಮ್ಯಾಜಿಸ್ಟ್ರೇಟ್ ಸಮಕ್ಷಮ ನಡೆದಿತ್ತು.
ಸರಕಾರ ಈ ಪ್ರಕರಣದ ಲಾಕಪ್ ಡೆತ್ ಎಂದು ಪರಿಗಣಿಸಿ ಗಂಭೀರ ವಾಗಿ ತೆಗೆದುಕೊಂಡು ಸಿ.ಒ.ಡಿ.ತನಿಖೆಗೆ ಆದೇಶಿಸಿದೆ.