ಬಂಟ್ವಾಳ: ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಮಾಜಿ ಕಬಡ್ಡಿ ಆಟಗಾರ ಕುಕ್ಕಳ ಗ್ರಾಮದ ಒಳಬಲ್ ನಿವಾಸಿ ಕಾಂತಪ್ಪ ಭಂಡಾರಿ(67) ಅವರು ಅನಾರೋಗ್ಯದಿಂದ ನ.6ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿಯನ್ನು ಅಗಲಿದ್ದಾರೆ. ಅವರು ಅಂಚೆ ಇಲಾಖೆಯ ನಿವೃತ್ತ ನೌಕರರಾಗಿದ್ದರು. ಆರೆಸ್ಸೆಸ್‌ನ ಕಾರ್ಯಕರ್ತರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿದ್ದರು. ಪುಂಜಾಲಕಟ್ಟೆ ಶ್ರೀ ಶಾರದಾಂಬಾ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿದ್ದರು. ಉತ್ತಮ ಕಬಡ್ಡಿ ಆಟಗಾರರಾಗಿದ್ದ ಅವರು ವಿವಿಧೆಡೆ ಪ್ರಶಸ್ತಿಗೆ ಭಾಜನರಾಗಿದ್ದರು.

