ಬಂಟ್ವಾಳ: ಗಂಜಿಮಠ ಇಲ್ಲಿನ ಸ್ಥಳೀಯ ಪೆಟ್ರೋಲ್ ಪಂಪ್ ಒಂದರಲ್ಲಿ ಪಂಪ್ ನ ಬಾವಿಯ ಸ್ಲಾಬ್ ಕೆಲಸ ಮಾಡುತ್ತಿದ್ದ ಕಾರ್ಮಿಕರೋಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಸಿದ್ದಕಟ್ಟೆ ನಿವಾಸಿ ವೆಂಕಪ್ಪ (40) ಮೃತಪಟ್ಟ ದುದೈವಿ.


ಅಶೋಕ್ ಶೇಟ್ ಎಂಬವರು ಗಾಯಗೊಂಡಿದ್ದಾರೆ. ಗಂಜಿಮಠದ ಬಲ್ಲಾಳ್ ಟೈಲ್ಸ್ ಬಳಿಯ ಪೆಟ್ರೋಲ್ ಪಂಪ್ ನಲ್ಲಿ ಪೆಟ್ರೋಲ್ ಬಾವಿಯ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಸ್ಲಾಬ್ ಕೆಲಸ ಮಾಡುವ ಸಮಯದಲ್ಲಿ ಒಮ್ಮೆ ಹಾಕಲಾಗಿದ್ದ ಸ್ಲಾಬ್ ಮುರಿದು ಇಬ್ಬರು ಕಾರ್ಮಿಕರು ಬಾವಿಗೆ ಬಿದ್ದಿದ್ದಾರೆ. ಎಂದು ವರದಿಯಾಗಿದೆ.
ಬಜಪೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.