Wednesday, July 9, 2025

ನಿಧನ: ಬಿ.ನಾರಾಯಣ ಸೋಮಯಾಜಿ

ಬಂಟ್ವಾಳ: ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ.ಸಿ.ರೋಡು ಮಯ್ಯರಬೈಲು ನಿವಾಸಿ ಬಿ.ನಾರಾಯಣ ಸೋಮಯಾಜಿ (64) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು. ಅವರು ಪತ್ನಿ, ಸಹೋದರ, ಸಹೋದರಿ ಸಹಿತ ಬಂಧು ಮಿತ್ರರನ್ನು ಹೊಂದಿದ್ದರು. ಕಳೆದ 24 ವರ್ಷಗಳಿಂದ ಅವರು ಬಂಟ್ವಾಳ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು.

More from the blog

ಕಾರ್ಮಿಕರ ಅಖಿಲ ಭಾರತ ಮುಷ್ಕರದ ಅಂಗವಾಗಿ ಕಾರ್ಮಿಕರ ಪ್ರತಿಭಟನೆ..

ಬಂಟ್ವಾಳ : ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರದ ದ ಅಂಗವಾಗಿ ಜೆ.ಸಿ.ಟಿ.ಯು ಮತ್ತು ಸಂಯುಕ್ತ ಹೋರಾಟ...

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...