Sunday, January 25, 2026

ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದವರು ನೀರಿನಲ್ಲಿ ಮುಳುಗಿ ಸಾವು

ಬಂಟ್ವಾಳ, ಮೇ ೨೫: ನೇತ್ರಾವತಿ ನದಿಗೆ ಸ್ನಾನಕ್ಕೆ ತೆರಳಿದ್ದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬರೀಮಾರು ಎಂಬಲ್ಲಿ ಶನಿವಾರ ಸಂಭವಿಸಿದೆ.


ಮೃತರನ್ನು ಮನೀಷ್ (೧೪) ಮತ್ತು ಅಜೀತ (೪೦) ಎಂದು ಗುರುತಿಸಲಾಗಿದ್ದು, ರಕ್ಷಿತ್ (೧೩) ಎಂಬಾತನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಬಂಟ್ವಾಳ ತಾಲೂಕು ಬರೀಮಾರು ಗ್ರಾಮದ ಕಾಗೆಕಾನ ಎಂಬಲ್ಲಿನ ನೇತ್ರಾವತಿ ನದಿಯಲ್ಲಿ ನೀರಾಟವಾಡುತ್ತಿದ್ದಾಗ ಈ ಅವಘಡ ಸಂಭವಿದೆ ಎನ್ನಲಾಗಿದೆ.

ಬರಿಮಾರು ಸಂಬಂಧಿಕರ ಮನೆಗೆ ಆಗಮಿಸಿದ ಇವರು ನೇತ್ರಾವತಿ ನದಿಗೆ ಸ್ನಾನ ಕ್ಕೆಂದು ತೆರಳಿದ್ದರು.ನದಿಯ ನೀರಿನ ಆಳ ತಿಳಿಯದ ಇವರು ನೀರಿನಲ್ಲಿ ಮುಳುಗಿರಬೇಕು ಎಂದು ಸ್ಥಳೀಯ ರು ತಿಳಿಸಿದ್ದಾರೆ.

ನಾಳೆ ಸೋಮೇಶ್ವರ ದಲ್ಲಿ ನಡೆಯುವ ಮದುವೆ ಕಾರ್ಯಕ್ರಮ ಕ್ಕೆ ಮುಂಚಿತವಾಗಿ ಇವರು ಬಂದಿದ್ದರು.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಪೊಲೀಸರು ಇನ್ನಷ್ಟೇ ತಿಳಿಸಬೇಕಿದೆ.

More from the blog

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ – ಕೆ.ಪಿ.ಎಸ್ ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕಿ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ :ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ ದಕ್ಷಿಣ ಕನ್ನಡ...

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ..

ಬಂಟ್ವಾಳ: ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವವು ಶತರುದ್ರಾಭಿಷೇಕ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ತಂತ್ರಿಗಳಾದ ದಿನೇಶ್‌ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಪುಣ್ಯಾಹ, ಗಣಹೋಮ, ಶತರುದ್ರಾಭಿಷೇಕ, ನವಕ ಕಲಶಾಭಿಷೇಕ, ವೀರಾಂಜನೇಯ...