ಬಂಟ್ವಾಳ: ಸರಕಾರಿ ಶಾಲೆಗಳನ್ನು ನವೋದಯ ಶಾಲೆಗಳ ರೀತಿಯಲ್ಲಿ ಮಾದರಿ ಶಾಲೆಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪಿಎಂಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಗೆ ಬಂಟ್ವಾಳದಲ್ಲಿ ಮೊದಲ ಹಂತದಲ್ಲಿ ಸುರಿಬೆಲು ಸರಕಾರಿ ಶಾಲೆ ಆಯ್ಕೆಯಾಗಿದ್ದು, ಇದೀಗ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಶಾಲೆ, ವಿಟ್ಲ ಸರಕಾರಿ ಪ್ರೌಢಶಾಲೆ(ಆರ್‌ಎಂಎಸ್‌ಎ), ಕೊಡಂಗೆ ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಹೂಹಾಕುವಕಲ್ಲು ಸರಕಾರಿ ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ.

ಆಯ್ಕೆಯಾದ ಶಾಲೆಗಳಲ್ಲಿ ಹೂಹಾಕುವಕಲ್ಲು ಸರಕಾರಿ ಪ್ರಾಥಮಿಕ ಶಾಲೆಯು ಪ್ರಸ್ತುತ ಉಳ್ಳಾಲ ತಾಲೂಕು ವ್ಯಾಪ್ತಿಯಲ್ಲಿದ್ದು, ಆದರೆ ಹಿಂದೆ ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿದ್ದ ಉಳ್ಳಾಲದ ಶಾಲೆಗಳನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಽಕಾರಿಗಳ ಕಚೇರಿಯಿಂದಲೇ ನಿರ್ವಹಣೆ ಮಾಡಲಾಗುತ್ತಿದೆ.
ಯೋಜನೆಯಲ್ಲಿ ಶಾಲೆಗೆ ಅಗತ್ಯವಿರುವ ಸ್ಮಾರ್ಟ್ ಲ್ಯಾಬ್, ಸ್ಮಾರ್ಟ್ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿ, ತರಗತಿ ಕೊಠಡಿ, ಶೌಚಾಲಯ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಽಸಲು ಬೇಕಾದ ಸಲಕರಣೆಗಳನ್ನು ಯೋಜನೆಯ ಮೂಲಕ ಒದಗಿಸುವ ಕಾರ್ಯ ನಡೆಯಲಿದೆ.
ದಡ್ಡಲಕಾಡು ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಪಡಿಸುವ ಜತೆಗೆ ಒಂದೇ ದೇಶ, ಒಂದೇ ಶಿಕ್ಷಣ ಜಾರಿಯಾಗಬೇಕು ಎಂದು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಮೂಲಕ ಹೋರಾಟ ಮಾಡಲಾಗಿದ್ದು, ಪ್ರಸ್ತುತ ನಮ್ಮ ಶಾಲೆಯು ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿರುವುದು ಹೋರಾಟಕ್ಕೆ ಸಿಕ್ಕಿರುವ ಜಯವಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್ ತಿಳಿಸಿದ್ದಾರೆ.
ಟ್ರಸ್ಟ್ ಮೂಲಕ ಹೊಸದಿಲ್ಲಿಯ ಜಂತನ್‌ಮAಥರ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಏಕರೂಪ ಶಿಕ್ಷಣ ಪದ್ಧತಿ ಜಾರಿಯಾಗುವಂತೆ ಸರಕಾರವನ್ನು ಒತ್ತಾಯ ಮಾಡಲಾಗಿತ್ತು. ೨೮ ವಿದ್ಯಾರ್ಥಿಗಳಿದ್ದ ದಡ್ಡಲಕಾಡು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪಿಸಿ ೨೦೨೩-೨೪ನೇ ಶೈಕ್ಷಣಿಕ ವರ್ಷದಲ್ಲಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಸಾವಿರ ದಾಟಿದೆ. ಪ್ರಸ್ತುತ ಪಿಎಂಶ್ರೀ ಯೋಜನೆಯ ಮೂಲಕ ನಮ್ಮ ಶಾಲೆಯ ಚಿತ್ರಣವೇ ಬದಲಾಗಲಿದ್ದು, ರಾಜ್ಯದಿಂದ ಕೇಂದ್ರಕ್ಕೆ ಸಲ್ಲಿಕೆಯಾದ ೧೨ ಸಾವಿರಕ್ಕೂ ಅಽಕ ಅರ್ಜಿಯಲ್ಲಿ ನಮ್ಮ ಶಾಲೆಗೂ ಈ ಅವಕಾಶ ಸಿಕ್ಕಿರುವುದು ನಮ್ಮ ಹೋರಾಟದ ಪ್ರತಿಫಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರಮಾನಂದ, ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕಿ ಸಿಂಥಿಯಾ ಲೋಬೋ, ಕಾರ್ಯಾಧ್ಯಕ್ಷ ಪುರುಷೋತ್ತಮ ಅಂಚನ್, ರಾಮಚಂದ್ರ ಕರೆಂಕಿ, ನವೀನ್ ಸೇಸಗಿರಿ, ನಾಗೇಶ್ ಟೈಲರ್, ಶಿಕ್ಷಕಿ ಅನಿತಾ, ಸಿಆರ್‌ಪಿ ಪ್ರೇಮಲತಾ ಉಪಸ್ಥಿತರಿದ್ದರು.