Tuesday, July 1, 2025

ಜುಗಾರಿ ಅಡ್ಡೆಗೆ ದಾಳಿ : 1,53,370ರೂ. ಮೌಲ್ಯದ ಸೊತ್ತು ವಶ

ಬಂಟ್ವಾಳ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ನೋವುಂಡ ಸರಕಾರಿ ಅರಣ್ಯ ಪ್ರದೇಶದ ಪಂಜಿ ಕುಡೇಲು ಎಂಬಲ್ಲಿ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಹಣವನ್ನು ಪಣಕ್ಕೆ ಇಟ್ಟು ಜುಗಾರಿ ಆಡುತ್ತಿದ್ದ ಅಡ್ಡೆಯ ಮೇಲೆ ಪುಂಜಾಲಕಟ್ಟೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರು ದಾಳಿ ನಡೆಸಿ ದಾಳಿಯಲ್ಲಿ ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಹಾಗೂ 1,53,370 ಮೌಲ್ಯದ ಆಟಕ್ಕೆ ಬಳಸಿದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಿಲೀಪ್ , ಹರೀಶ್ , ಇಕ್ಬಾಲ್, ಲತೀಫ್ ,ಶೇಖರ್, ಸತೀಶ್, ಶೇಖರ ಆಚಾರಿ ಎಂಬವರುಗಳನ್ನು ವಶಕ್ಕೆ ಪಡೆದಿದ್ದು, ಅವರಿಂದ ಇಸ್ಪೀಟು ಎಲೆಗಳು, ಪಣಕ್ಕೆ ಇಟ್ಟಿದ್ದ 1320/- ರೂ ಹಣ .ಇಸ್ಪೀಟ್ ಎಲೆಗಳು-52 ಹಾಗೂ ನೀಲಿ ಬಣ್ಣದ ಟರ್ಫ್ ಲ್-1 ಹಾಗೂ ಮೋಟಾರ್ ಸೈಕಲ್ -2 ಹಾಗೂ ಆಟೋರಿಕ್ಷಾ -1 ವಶಕ್ಕೆ ಪಡೆಯಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಲಂ 87 ಕರ್ನಾಟಕ ಪೊಲೀಸ್ ಕಾಯ್ದೆ 1963 ರಂತೆ ಪ್ರಕರಣ ದಾಖಲಾಗಿರುತ್ತದೆ.
ದಾಳಿಯಲ್ಲಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ಸೌಮ್ಯ ಜೆ ಹಾಗೂ ಸಿಬ್ಬಂದಿಗಳಾದ ನಾರಾಯಣ ಎಎಸ್ಐ ಮತ್ತು ಪಿ ಸಿ ಗಳಾದ ಸಾಬು ಮಿರ್ಜಿ .ಹರೀಶ್ ಪಾಲ್ಗೊಂಡಿರುತ್ತಾರೆ.

More from the blog

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ) ನೂತನ ಅಧ್ಯಕ್ಷರಾಗಿ ಜಗದೀಶ್ ಎನ್ ಆಯ್ಕೆ..

ಬಂಟ್ವಾಳ : ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆದು...

ಕೊಲೆಯತ್ನ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..

ಬಂಟ್ವಾಳ : ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಬಂಧಿತ ಆರೋಪಿ. 2011ನೇ ಸಾಲಿನಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ...

‘ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು’- ಒಡಿಯೂರು ಶ್ರೀ

ವಿಟ್ಲ: ಕೃಷಿ ಎಂಬುದು ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲಿಯೂ ಕೃಷಿ ನಡೆಯಬೇಕು. ಪ್ರತಿಯೊಂದಕ್ಕೂ ಸಂಸ್ಕಾರ ನೀಡುವ ಕಾರ್ಯವಾದಾಗ ಸುಸೂತ್ರವಾಗಿ ನಡೆಯುತ್ತದೆ. ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಕಲೆ,...