ಬಂಟ್ವಾಳ: ಡಿ.6 ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಯಾದ ಬೆನ್ನಲ್ಲೇ ಬಂಟ್ವಾಳದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ, ಅಯಕಟ್ಟಿನ ಪ್ರದೇಶದಲ್ಲಿ ಹೆಚ್ಚುವರಿ ಪೋಲೀಸರ ನಿಯೋಜನೆ ಮಾಡಲಾಗಿದೆ ಎಂದು ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ತಿಳಿಸಿದ್ದಾರೆ.
ಬಂಟ್ವಾಳ ವೃತ್ತ ದ ವಿಟ್ಟ ಪರಿಸರದಲ್ಲಿ ಡಿ. 6 ಕರಾಳ ದಿನಾಚರಣೆ ಅಂಗವಾಗಿ ಬಿತ್ತಿ ಪತ್ರಗಳನ್ನು ಅಂಟಿಸುತ್ತಿದ್ದ ಯುವಕರ ಮೇಲೆ ವಿಟ್ಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಯೋಧ್ಯೆ ಮತ್ತು ಬಾಬರಿ ಮಸೀದಿ ವಿಚಾರವಾಗಿ ಕರಾಳ ಹಾಗೂ ವಿಜಯೋತ್ಸವ ಎರಡು ಕಾರ್ಯಕ್ರಮ ಗಳಿಗೆ ಅವಕಾಶ ನೀಡದ ಜಿಲ್ಲಾಡಳಿತ ಜಿಲ್ಲೆಯಾದ್ಯಂತ 144 ಸೆಕ್ಷನ್ ಜಾರಿಗೊಳಿಸದ ಹಿನ್ನಲೆಯಲ್ಲಿ
ಗುರುವಾರ ರಾತ್ರಿ ಯಿಂದಲೇ ಪೋಲೀಸರ ಗಸ್ತು ಕಾರ್ಯ ಆರಂಭವಾಗಿದ್ದು, ಸೆಕ್ಟರ್ ಅಧಿಕಾರಿಗಳು ಪಟ್ರೋಯಿಂಗ್ ನಡೆಸುತ್ತಿದ್ದಾರೆ.
ಗಡಿಭಾಗದಲ್ಲಿ ಎಚ್ಚರಿಕೆಯಿಂದ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಕೆ.ಎಸ್.ಆರ್.ಪಿ.ಪೋಲೀಸರ ನಿಯೋಜನೆ ಮಾಡಲಾಗಿದೆ.
ಜಿಲ್ಲಾಧಿಕಾರಿಯವರ ಆದೇಶ ಮೀರಿ ವರ್ತಿಸಿದರೆ ಅಂತವರ ಮೇಲೆ ಪ್ರಕರಣ ದಾಖಲಿಸಿ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.














