ಕೇಂದ್ರ ಸರಕಾರದ 14ನೇ ಹಣಕಾಸು ಆಯೋಗದಡಿ ದಕ್ಷಿಣಕನ್ನಡ ಜಿಲ್ಲೆಯ 230 ಗ್ರಾಮ ಪಂಚಾಯತ್‌ಗಳಿಗೆ 2016-17, 17-18, 18-19ನೇ ಅವಧಿಯಲ್ಲಿ ಒಟ್ಟು ರೂ.150,24,53,995 (ನೂರಐವತ್ತು ಕೋಟಿ ಇಪ್ಪತ್ತಾಲ್ಕು ಲಕ್ಷ ಐವತ್ತಮೂರು ಸಾವಿರದ ಒಂಬೈನೂರ ತೊಂಬತ್ತ ಐದು) 24 ಲಕ್ಷ 53 ಸಾವಿರದ 995 ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ರೂ.29,48,07,514 (ಇಪ್ಪತ್ತೋಂಬತ್ತು ಕೊಟಿ ನಲವತ್ತೇಂಟು ಲಕ್ಷ ಏಳು ಸಾವಿರದ ಐನೂರ ಹದಿನಾಲ್ಕು) ಗ್ರಾಮ ಪಂಚಾಯತ್‌ಗಳ ವಿದ್ಯುತ್ ಬಿಲ್ಲು ಪಾವತಿಸಲಾಗಿದೆ.
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಇವರ ಲಿಖಿತ ಪ್ರಶ್ನೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಾದ ಕೃಷ್ಣ ಬೈರೇ ಗೌಡರವರು ನೀಡಿದ ಉತ್ತರದಲ್ಲಿ ಈ ಮಾಹಿತಿ ನೀಡಲಾಗಿದೆ.

