ಬಂಟ್ವಾಳ: ಅಕ್ರಮವಾಗಿ ಮರಳುಗಾರಿಕೆಗೆ ಸಂಬಂಧಿಸಿದ ಡ್ರಜ್ಜಿಂಗ್ ಮೆಷಿನ್ ಒಂದನ್ನು ಮಂಗಳೂರು ಗಣಿ ಇಲಾಖೆಯವರು ವಶಕ್ಕೆ ತೆಗೆದುಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕರಿಂಯಂಗಳ ಎಂಬಲ್ಲಿ ನಡೆದಿದೆ.
ಕರಿಯಂಗಳ ಗ್ರಾಮ ಪಲ್ಗುಣಿ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ಗೆ ಬಳಸಿರುವ ಡ್ರಜ್ಜಿಂಗ್ ಮೆಷಿನ್ ಒಂದನ್ನು ಗಣಿ ಇಲಾಖೆಯವರು ವಶಕ್ಕೆ ಪಡೆದುಕೊಂಡು ಬಳಿಕ
ಗಂಜಿ ಮಠ ಯಾರ್ಡ್ ನಲ್ಲಿ ಇಡಲಾಗಿದೆ.
ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಯನ್ನು ಪಡೆಯುವ ಉದ್ದೇಶದಿಂದ ಗಣಿ ಇಲಾಖೆ ಗೆ ಪೋನ್ ಸಂಪರ್ಕ ಮಾಡಿದರೆ ಅಲ್ಲಿ ಜವಬ್ದಾರಿ ಸ್ಥಾನದಲ್ಲಿ ರುವ ಯಾವ ಅಧಿಕಾರಿಯೂ ಕರೆ ಸ್ವೀಕಾರ ಮಾಡುವುದಿಲ್ಲ. ಈ ಹಿಂದೆ ಅನೇಕ ಬಾರಿ ವರದಿಯ ಸ್ಪಷ್ಟನೆಗಾಗಿ ಕರೆ ಮಾಡಿದಾಗಲೂ ಇದೇ ಸ್ಥಿತಿಯಾಗಿತ್ತು.
ಈ ಬಗ್ಗೆ ಜಿಲ್ಲಾಧಿಕಾರಿ ಯವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ವಾಗಿಲ್ಲ.


