ವಿಟ್ಲ ಸಿಪಿಸಿಆರ್‌ಐ ನಲ್ಲಿ ತೋಟಗಾರಿಕಾ ಮೇಳ 

ವಿಟ್ಲ: ವಿಟ್ಲ ಸಿಪಿಸಿಆರ್‌ಐ ನಲ್ಲಿ ತೋಟಗಾರಿಕಾ ಮೇಳ ಉದ್ಘಾಟನೆಗೊಂಡಿತು.

ಪದ್ಮಶ್ರೀ ಪುರಸ್ಕೃತ ರೈತ ಸತ್ಯ ನಾರಾಯಣ ಬೆಳೇರಿ ಮಾತನಾಡಿ, ವೇದ ಕಾಲದಲ್ಲಿ 4 ಲಕ್ಷ ಭತ್ತದ ತಳಿಗಳು ಈಗ ಸಾವಿರಕ್ಕೆ ಇಳಿದಿದೆ. ಸವಾಲುಗಳ ನಡುವೆ, ಆಸಕ್ತಿ ವಹಿಸಿ ತಳಿಯನ್ನು ಉಳಿಸುವ ಕಾರ್ಯಮಾಡಲಾಗಿದೆ. ಪ್ರತಿ ವರ್ಷ ಬೆಳೆಯುವ ಮೂಲಕ ಆಹಾರ ತಳಿಗಳನ್ನು ನಾವು ಉಳಿಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಿಪಿಸಿಆರ್‌ಐ ವಿಟ್ಲ ಮುಖ್ಯಸ್ಥ ಡಾ. ಎಂ. ಕೆ. ರಾಜೇಶ್ ಮಾತನಾಡಿ ಅಡಕೆ ಎಲೆ ಚುಕ್ಕಿ ರೋಗದ ನಿರ್ವಹಣಾ ಮಾರ್ಗಸೂಚಿಯನ್ನು ನೀಡಲಾಗಿದೆ. ಹಳದಿ ಎಲೆ ರೋಗದ ತಪಾಸಣಾ ಕೇಂದ್ರವನ್ನು ವಿಟ್ಲದಲ್ಲಿ ಸ್ಥಾಪಿಸಲಾಗಿದ್ದು, ಸದ್ಯದಲ್ಲೇ ಮಾದರಿಗಳ ಪರೀಕ್ಷೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ ವಿಭಾಗದ ಪ್ರಧಾನ ವಿಜ್ಞಾನಿ ಡಾ. ವಿ. ನಿರಲ್, ಕಾಸರಗೋಡು ಸಿಪಿಸಿಆರ್‌ಐ ಸಸ್ಯ ಅಭಿವೃದ್ಧಿ ವಿಭಾಗ ಮುಖ್ಯಸ್ಥೆ ಡಾ. ಎಸ್. ಎಲ್ಲೈನ್ ಅಪ್ಸರಾ ಉಪಸ್ಥಿತರಿದ್ದರು.

ನಯನ, ದೀಪಶ್ರೀ ಪ್ರಾರ್ಥಿಸಿದರು. ಸಿ.ಪಿ.ಸಿ.ಆರ್‌.ಐ. ಹಿರಿಯ ವಿಜ್ಞಾನಿ ಡಾ. ನಾಗರಾಜ ಎನ್. ಆರ್. ಸ್ವಾಗತಿಸಿದರು. ವಿಜ್ಞಾನಿ ಡಾ. ಮಧು ಟಿ. ಎನ್. ವಂದಿಸಿದರು. ಹಿರಿಯ ವಿಜ್ಞಾನಿ ಡಾ. ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು.