Wednesday, February 4, 2026

ಕೋವಿಡ್ ತಪಾಸಣಾ ಶಿಬಿರ

ಬಂಟ್ವಾಳ:  ರೋಟರಿ ಕ್ಲಬ್ ಬಂಟ್ವಾಳ  ಟೌನ್, ಪುರಸಭೆ ಬಂಟ್ವಾಳ ಮತ್ತು ಸಾರ್ವಜನಿಕ  ಆರೋಗ್ಯಾ ಕೇಂದ್ರ ಬಂಟ್ವಾಳ ಇದರ ಸಂಯುಕ್ತ ಆಶ್ರಯದಲ್ಲಿ ಮೆಲ್ಕಾರಿನ ಅಂಗನವಾಡಿ , ಭಜನಾ ಮಂದಿರ ಪರಿಸರದಲ್ಲಿ ಕೋವಿಡ್ ತಪಾಸಣಾ ಶಿಬಿರವನ್ನು ನಡೆಸಲಾಯಿತು.  ರೋಟರಿ  ಕ್ಲಬ್ ಅಧ್ಯಕ್ಷ ಪದ್ಮನಾಭ ರೈ ಯವರು ಮಾತನಾಡಿ, ಕೋವಿಡ್ ರೋಗ ತಡೆಗಟ್ಟುವಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಿದೆ  ಎಂದರು. ಕಾರ್ಯಕ್ರಮದಲ್ಲಿ ರೋಟೋರಿಯನ್ಸ್ ಕಾರ್ಯದರ್ಶಿ  ಕಿಶೋರ್, ಗಣೇಶ್ ಶೆಟ್ಟಿ, ಚಂದ್ರಶೇಖರ್ ಪೂಜಾರಿ, ರಮೇಶ್ ನೆಟ್ಲ, ಸುಂದರ್ ಬಂಗೇರ, ಸುದೀರ್ ಶೆಟ್ಟಿ, ಪಿ.ಎಚ್.ಎಫ್. ಸತೀಶ್, ಪುರಸಭಾ ಮುಖ್ಯಾಧಿಕಾರಿ ಲೀನಾ  ಬ್ರೊಟ್ಟೋ, ಪುರಸಭಾ ಸ್ಥಳೀಯ  ಸದಸ್ಯೆ ಜೆಸಿಂತಾ ಡಿಸೋಜಾ, ಅಂಗನವಾಡಿ  ಶಿಕ್ಷಕಿ ವಸಂತಿ, ಸರಕಾರಿ  ಪ್ರಾಥಮಿಕ ಅರೋಗ್ಯ ಕೇಂದ್ರದ ಸಿಬ್ಬಂದಿ ಅಶೋಕ್, ಸಹಾಯಕ  ಇಂಜಿನಿಯರ್ ಇಕ್ಬಾಲ್ ಈ ಸಂದರ್ಭದಲ್ಲಿ ಹಾಜರಿದ್ದರು.

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಕುದ್ರೆಬೆಟ್ಟು : ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ – ನಾಲ್ವರಿಗೆ ಗಾಯ

ಬಂಟ್ವಾಳ: ಕಲ್ಲಡ್ಕ ಸಮೀಪದ ಕುದ್ರೆಬೆಟ್ಟು ಮೇಲತ್ಸುವೆಯ ಕೊನೆಯ ಭಾಗದಲ್ಲಿ ರಿಕ್ಷಾ ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದ್ದು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ. ರಿಕ್ಷಾದಲ್ಲಿ ಪ್ರಯಾಣಿಕರಾಗಿದ್ದ ಅಳಕೆಮಜಿಲು ನಿವಾಸಿ ಅವ್ವಮ್ಮ ಹಾಗೂ ಸುಹೈಲ್ ರಿಕ್ಷಾ...

ಕಟೀಲು 7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಫೆ.04ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.04ರ ಸೇವೆಯಾಟಗಳ ವಿವರ : ದೀಪಕ್ ಶೆಟ್ಟಿ, ಬೈಲುತೇಂಜ ಹೌಸ್, ಕಂದಾವರ,...

ಗೋಳ್ತಮಜಲು : ಮಲ ತ್ಯಾಜ್ಯ ನಿರ್ವಹಣಾ ಘಟಕದ ನಿರ್ವಹಣೆಯಲ್ಲಿ ಎಡವಿತಾ ಸ್ಥಳೀಯಾಡಳಿತ?

ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ಸಮೀಪದ ಚಿಮಿಣಿಗುರಿಯಲ್ಲಿ ನಿರ್ಮಾಣಗೊಂಡಿರುವ ಬಹುಗ್ರಾಮ ಮಲ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಸಾಮರ್ಥ್ಯದಷ್ಟು ತ್ಯಾಜ್ಯದ ಲೋಡ್ ಬಾರದೇ ಇದ್ದು, ಘಟಕದ ವ್ಯಾಪ್ತಿಗೆ ಬರುವ ಸ್ಥಳೀಯಾಡಳಿತಗಳು...