ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಇಂದು ಮತ್ತೊಂದೆಡೆ ಕೋವಿಡ್-19 ಪಾಸಿಟಿವ್ ಪ್ರಕರಣ ಪತ್ತೆ.
ನರಿಕೊಂಬು ಗ್ರಾಮದ ನಾಯಿಲ ನಿವಾಸಿ ಮಹಿಳೆಗೆ ಕೊರೊನ ಪಾಸಿಟಿವ್ ದೃಢಪಟ್ಟಿದೆ. ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದ 48 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್.
ಬಂಟ್ವಾಳದ ಎ.21ರಂದು ಮೃತಪಟ್ಟಿದ್ದ P-432 ವೃದ್ದೆಯ ಸಂಪರ್ಕದಿಂದ ಸೋಂಕು. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ಪಾರ್ಶ್ವವಾಯುಗೆ ತುತ್ತಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ಧರು. ಬಳಿಕ ಎರಡು ದಿನಗಳ ಹಿಂದೆ ಎ.21ರಂದು ಕೋವಿಡ್-19 ಪಾಸಿಟಿವ್ ಪ್ರಕರಣದಿಂದ ಮೃತಪಟ್ಟಿದ್ದರು. ವೃದ್ದೆಯ ಸಂಪರ್ಕದಿಂದ ಅದೇ ಆಸ್ಪತ್ರೆಯಲ್ಲಿ ಸ್ವೀಪರ್ ಕೆಲಸ ಮಾಡುತ್ತಿದ್ದ ಮಹಿಳೆಗೆ ಸೋಂಕು.


ಮೃತಪಟ್ಟ ಮಹಿಳೆಗೆ ಕೊರೊನ ಪಾಸಿಟಿವ್ ದೃಡವಾದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ದೃಢವಾದ ಮಹಿಳೆಯು ಮಂಗಳೂರಿನಲ್ಲಿ ಕ್ವಾರಂಟೈನ್ ನಲ್ಲಿದ್ದರು. ನರಿಕೊಂಬು ಗ್ರಾಮದ ನಾಯಿಲ ಸೀಲ್ ಡೌನ್ ಮಾಡಲಾಗಿದೆ. ಈ ಭಾಗದ ಜನರು ಯಾರು ಕೂಡಾ ಜಿಲ್ಲಾಡಳಿತದ ಮುಂದಿನ ಅದೇಶದವರಗೆ ಹೊರಗೆ ಬರುವಂತಿಲ್ಲ.
ಈ ಗ್ರಾಮದ ಜನರಿಗೆ ಬೇಕಾದ ದಿನಬಳಕೆಯ ವಸ್ತುಗಳ ಪೂರೈಕೆಗೆ ತಾಲೂಕು ಆಡಳಿತ ಸ್ಥಳೀಯ ಗ್ರಾಮ ಪಂಚಾಯತ್ ಮೂಲಕ ಮಾಡಲಿದೆ.
ಬಂಟ್ವಾಳ ಕುಟುಂಬದ ಇಬ್ಬರು ಸೇರಿ ಹೊರಗಿನ ಮೂವರಿಗೆ ಸೋಂಕು. ಇದರಲ್ಲಿ ಒಂದೇ ಕುಟುಂಬದ ಇಬ್ಬರು ಸಾವು, ಮೂವರಿಗೆ ಚಿಕಿತ್ಸೆ ನಡೆಯುತ್ತಿದೆ. ದ.ಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 12 ಡಿಸ್ಚಾರ್ಜ್, 2 ಸಾವು ಮತ್ತು 5 ಮಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.












