Monday, July 14, 2025

ಬಂಟ್ವಾಳ: ಕೊರೋನದಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ

ಬಂಟ್ವಾಳ: ಕೋವಿಡ್ – 19 (ಕೊರೋನ) ಸೋಂಕಿಗೆ ಮೃತಪಟ್ಟ ತಾಲೂಕಿನ ಲೊರೆಟೊ ಪದವು ಮಹಿಳೆಯ ದಫನ ಕಾರ್ಯವನ್ನು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ವಿಶೇಷ ತರಬೇತಿ ಪಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಇಂದು  (ರವಿವಾರ) ನೆರವೇರಿಸಿದರು.

ಲೊರೆಟೊ ಪದವು ಜುಮಾ ಮಸೀದಿಯ ದಫನ ಭೂಮಿಯಲ್ಲಿ ನಡೆದ ಅಂತ್ಯಸಂಸ್ಕಾರದ ವೇಳೆ ಇಲ್ಲಿನ ಬದ್ರ್ ಜುಮಾ ಮಸೀದಿಯ ಖತೀಬ್ ಶರೀಫ್ ಅರ್ಶದಿ ನೇತೃತ್ವದಲ್ಲಿ ನಮಾಝ್ ನಿರ್ವಹಿಸಲಾಯಿತು. ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ, ಪಿ.ಎಫ್.ಐ. ಸದಸ್ಯರಾದ ಉಬೈದುಲ್ಲಾ ಬಂಟ್ವಾಳ, ಇಸ್ಮಾಯೀಲ್ ಬಂಟ್ವಾಳ, ಅಬ್ದುಲ್ ಲತೀಫ್ ಬಂಟ್ವಾಳ, ಫಿರೋಜ್ ಗೂಡಿನ ಬಳಿ, ನಿಸಾರ್ ವಳವೂರು ಮೃತರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳನ್ನು ನಡೆಸಿದರು. ಈ ಸಂದರ್ಭದಲ್ಲಿ ಮೃತರ ಕಿರಿಯ ಮಗ ಸುಹೈಲ್ ಪಾಲ್ಗೊಂಡಿದ್ದರು.

More from the blog

ಯುವವಾಹಿನಿ ಬಂಟ್ವಾಳ ಘಟಕ : ‘ಆಟಿಡೊಂಜಿ ಕೂಟ’ ಕಾರ್ಯಕ್ರಮದ ಆಮಂತ್ರಣ ಬಿಡುಗಡೆ..

ಬಂಟ್ವಾಳ : ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಆಗಸ್ಟ್ 10 ರಂದು ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯುವ ಆಟಿಡೊಂಜಿ ಕೂಟ ಸಮಾರಂಭದ ಆಮಂತ್ರಣ ಪತ್ರವನ್ನು ಘಟಕದ ಮಾಸಿಕ ಸಭೆಯಲ್ಲಿ ಬಿಡುಗಡೆ ಮಾಡಲಾಯಿತು. ಈ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಬಂಟರ ಸಂಘ ನರಿಕೊಂಬು – ಶಂಭೂರು ಅಧ್ಯಕ್ಷರಾಗಿ ಪ್ರೇಮನಾಥ ಶೆಟ್ಟಿ ಪುನರಾಯ್ಕೆ..

ಬಂಟ್ವಾಳ: ನರಿಕೊಂಬು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪ್ರೇಮನಾಥ ಶೆಟ್ಟಿ ಅಂತರ ಅವರು ಬಂಟರ ಸಂಘ ನರಿಕೊಂಬು- ಶಂಭೂರು ಗ್ರಾಮ ಅಧ್ಯಕ್ಷರಾಗಿ ಸರ್ವಾನುಮತದಿಂದ ಪುನರಾಯ್ಕೆ ಆಗಿದ್ದಾರೆ. ಜು. 10 ರಂದು ಕರ್ಬೆಟ್ಟು ಭಾಸ್ಕರ ಶೆಟ್ಟಿ ವಸತಿಗ್ರಹದಲ್ಲಿ...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...