ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರ 8 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 378 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಇಬ್ಬರು ವ್ಯಕ್ತಿಗಳು ವಿದೇಶದಿಂದ ಬಂದವರಾಗಿದ್ದು, ಒರ್ವ ವ್ಯಕ್ತಿ ಮಹಾರಾಷ್ಟ್ರ ದಿಂದ ಬಂದವರು.
ಮೂವರಿಗೆ ಪೇಶಂಟ್ ಸಂಖ್ಯೆ 6282 ರಿಂದ ಹರಡಿದೆ ಹಾಗೂ ಒಬ್ಬರು ಪೇಶಂಟ್ ಸಂಖ್ಯೆ 6284, ಮತ್ತೊಬ್ಬರು ಪೇಶಂಟ್ ಸಂಖ್ಯೆ 5765 ಸಂಪರ್ಕಕ್ಕೆ ಬಂದಿರುವುದರಿಂದ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಇದೆ. ಎಲ್ಲಾ ಸೋಂಕಿತರಿಗೆ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

