ಬಂಟ್ವಾಳ: ರಾಜ್ಯದಲ್ಲಿ ಇಂದು 308 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 5760ಕ್ಕೆ ಏರಿಕೆಯಾಗಿದೆ.
ಕಲಬುರಗಿ 99, ಯಾದಗಿರಿ 66, ಬೀದರ್ 48, ಉಡುಪಿ 45, ಬೆಂಗಳೂರು ನಗರ 18, ಬಳ್ಳಾರಿ 8, ಗದಗ 6, ಶಿವಮೊಗ್ಗ, ಧಾರವಾಡ ತಲಾ 4, ಹಾಸನ, ದ.ಕ. ತಲಾ 3, ಬಾಗಲಕೋಟೆ 2, ರಾಮನಗರ, ಕೊಪ್ಪಳ ತಲಾ 1 ಕೇಸ್ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ರಾಜ್ಯದಲ್ಲಿ ಇಂದು ಒಂದೇ ದಿನ 387 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 2519 ಮಂದಿ ಗುಣಮುಖರಾದ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇಂದು ರಾಜ್ಯದಲ್ಲಿ 3 ಮಂದಿ ಸೋಂಕಿತರು ಮೃತಪಟ್ಟು, ಒಟ್ಟು ಸಾವಿನ ಸಂಖ್ಯೆ 64ಕ್ಕೆ ಏರಿಕೆಯಾಗಿದೆ.

