ಬಂಟ್ವಾಳ : ರಾಜ್ಯದಲ್ಲಿ ಇಂದು 515 ಹೊಸ ಕೊರೋನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 4835ಕ್ಕೆ ಏರಿಕೆಯಾಗಿದೆ. ಉಡುಪಿ 204, ಯಾದಗಿರಿ 74, ವಿಜಯಪುರ 53, ಕಲಬುರಗಿ 42, ಬೀದರ್ 39, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 10, ದ. ಕ. 8, ಉ.ಕ. 7, ಧಾರವಾಡ, ಚಿಕ್ಕಬಳ್ಳಾಪುರ ತಲಾ 3, ರಾಮನಗರ, ಹಾವೇರಿ ತಲಾ 2, ಕೋಲಾರ, ಬಳ್ಳಾರಿ, ಬಾಗಲಕೋಟೆ, ದಾವಣಗೆರೆ ತಲಾ 1 ಕೇಸ್ ಪತ್ತೆಯಾಗಿದೆ.

ಇಂದು ರಾಜ್ಯದಲ್ಲಿ 83 ಮಂದಿ ಕೋವಿಡ್ ಮುಕ್ತರಾಗಿ ಮನೆಗೆ ತೆರಳಿದ್ದಾರೆ. ರಾಜ್ಯದಲ್ಲಿ ಒಟ್ಟು 1638 ಮಂದಿ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.
ಉಡುಪಿ ಜಿಲ್ಲೆಯ 204 ಮಂದಿಯು ಮಹಾರಾಷ್ಟ್ರದಿಂದ ಬಂದವರು ಎಂದು ತಿಳಿದುಬಂದಿದೆ.
ದ. ಕ. ಜಿಲ್ಲೆಯ ಸೋಂಕಿತರ ವಿವರ:
ದ. ಕ. ಜಿಲ್ಲೆಯ 8 ಪ್ರಕರಣದಲ್ಲಿ 7 ಮಂದಿ ಮಹಾರಾಷ್ಟ್ರ ದಿಂದ ಬಂದವರಾಗಿದ್ದು, ಇನ್ನೊಂದು ಪ್ರಕರಣಕ್ಕೆ ಟ್ರಾವೆಲ್ ಹಿಸ್ಟರಿ ಇಲ್ಲದೆ ಇರುವುದು ಆತಂಕಕ್ಕೆ ಕಾರಣವಾಗಿದೆ.

