ನವದೆಹಲಿ: ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ಗೆ ಭಾರತದಲ್ಲಿ ಒಟ್ಟು 13,700 ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 4.25 ಲಕ್ಷ ದಾಟಿದ ಬಗ್ಗೆ ವರದಿಯಾಗಿದೆ. 24 ಗಂಟೆಗಳಲ್ಲಿ 14,800ಕ್ಕೂ ಹೆಚ್ಚು ಸೋಂಕು ಪ್ರಕರಣಗಳು ದಾಖಲಾಗಿದ್ದು, ಇದೇ ಅವಧಿಯಲ್ಲಿ 445 ಸೋಂಕಿತರು ಮೃತಪಟ್ಟಿದ್ದಾರೆ.
ನಿನ್ನೆ ಒಂದೇ ದಿನ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 445 ಮಂದಿ ಸಾವಿಗೀಡಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ 13,700ಕ್ಕೇರಿದೆ ಹಾಗೂ ಸೋಂಕು ಪೀಡಿತರ ಸಂಖ್ಯೆ 4,25,282 ತಲುಪಿದೆ ಎಂಬ ಮಾಹಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ.
ಲಾಕ್‍ಡೌನ್ ಸಡಿಲಗೊಳಿಸಿದ ನಂತರ ದೇಶದಾದ್ಯಂತ ಸೋಂಕು ಮತ್ತು ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಂತೆ 24 ತಾಸುಗಳಲ್ಲಿ 9,444 ರೋಗಿಗಳು ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣದಲ್ಲಿ ಶೇ.55.77ರಷ್ಟು ಏರಿಕೆ ಕಂಡು ಬಂದಿರುವುದು ಸಮಾಧಾನಕಾರ ಸಂಗತಿ.
24 ಗಂಟೆಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ 445 ಸೊಂಕಿತರ ಸಾವಾಗಿದ್ದು, ಆ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿವೆ:
ಮಹಾರಾಷ್ಟ್ರ 186, ದೆಹಲಿ 63, ತಮಿಳುನಾಡು 53, ಉತ್ತರಪ್ರದೇಶ 43, ಗುಜರಾತ್ 25, ಉತ್ತರಪ್ರದೇಶ 30, ಪಶ್ಚಿಮ ಬಂಗಾಳ 14, ಮಧ್ಯಪ್ರದೇಶ 14, ರಾಜಸ್ತಾನ 12, ಹರಿಯಾಣ 11, ತೆಲಂಗಾಣ 7, ಆಂಧ್ರಪ್ರದೇಶ ಮತ್ತು ಕರ್ನಾಟಕ ತಲಾ 5, ಒಡಿಶಾ 2 ಹಾಗೂ ಬಿಹಾರ, ಜಮ್ಮು-ಕಾಶ್ಮೀರ, ಪುದುಚೇರಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ತಲಾ ೧ ಸಾವಾದ ಬಗ್ಗೆ ವರದಿಯಾಗಿದೆ.
ವಿಶ್ವದಲ್ಲಿ ಸೋಂಕು ಪ್ರಮಾಣದಲ್ಲಿ ಭಾರತವು ಬ್ರಿಟನ್‍ನನ್ನು ಹಿಂದಿಕ್ಕಿ ಈಗ ನಾಲ್ಕನೇ ಸ್ಥಾನಕ್ಕೇರಿದೆ. ಇದೇ ರೀತಿ ಸೊಂಕಿತರ ಸಂಖ್ಯೆ ಹೆಚ್ಚಾದಲ್ಲಿ ದೇಶ ಮೂರನೇ ಸ್ಥಾನಕ್ಕೆ ಏರುವುದು ಖಚಿತ.


