Thursday, July 10, 2025

ಕೊರೋನಾ ಸೋಂಕಿತ ವ್ಯಕ್ತಿ ಮರಣ, ಧಾರ್ಮಿಕ ವಿಧಿ ವಿಧಾನದ ಪ್ರಕಾರ ಅಂತ್ಯಕ್ರಿಯೆ ನಿರ್ವಹಿಸಿದ ಎಸ್.ಕೆ.ಎಸ್.ಎಸ್.ಎಫ್. ಜಿಲ್ಲಾ ವಿಖಾಯ ತಂಡ

ಬಂಟ್ವಾಳ : ಕೋವಿಡ್ -19 ಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳದ 85 ವರ್ಷ ಪ್ರಾಯದ ವೃದ್ದರೊಬ್ಬರು ಶನಿವಾರ ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸಂಜೆಯ ವೇಳೆಗೆ ಮಾರಿಪಳ್ಳ ಜುಮಾ ಮಸೀದಿಯ ದಫನ ಭೂಮಿಯಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಮಾರ್ಗಸೂಚಿ ಪ್ರಕಾರ ಧಪನ ಕಾರ್ಯವನ್ನು ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ದ.ಕ ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದ ಚೇರ್ ಮ್ಯಾನ್ ಸೈಯದ್ ಇಸ್ಮಾಯಿಲ್ ತಂಙಳ್ ಉಪ್ಪಿನಂಗಡಿ ರವರ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ದ.ಕ ಜಿಲ್ಲಾ ವಿಖಾಯ ತಂಡದ ಕನ್ವಿನರ್ ಆಸೀಫ್ ಕಬಕ, ಸದಸ್ಯರಾದ ಮುಸ್ತಫಾ ಕಟ್ಟದಪಡ್ಪು, ಫರಾಝ್ ಕುದ್ರೋಳಿ, ಶಮೀರ್ ಹೂಹಾಕುವಕಲ್ಲು, ಅಬೂಬಕ್ಕರ್, ರಮ್ಲಾನ್ ತಾಳಿಪಡ್ಪು, ಅಹ್ಮದ್ ಬಾವ ಅಜ್ಜಿನಡ್ಕ, ಶಾಕೀರ್ ಮಿತ್ತಬೈಲ್, ಶಬೀರ್ ತಾಳಿಪಡ್ಪು, ಪುದು ಗ್ರಾಮ ಪಂಚಾಯತ್ ಸದಸ್ಯ ಹಾಶೀರ್ ಪೇರಿಮಾರ್ ರವರು ಅಂತ್ಯಕ್ರಿಯೆ ಕಾರ್ಯದಲ್ಲಿ ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಬದ್ರಿಯ್ಯೀನ್ ಜುಮಾ ಮಸೀದಿ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ, ಫರಂಗಿಪೇಟೆ ಕ್ಲಸ್ಟರ್ ವಿಖಾಯ ಪದಾಧಿಕಾರಿಗಳಾದ ಎಂ.ಕೆ.ಬಿ. ಮಾರಿಪಳ್ಳ, ಇಮ್ರಾನ್ ಮಾರಿಪಳ್ಳ, ಮುಸ್ತಾಕ್ ಜಲಾಲಿಯ್ಯಾ ನಗರ, ಇನ್ಸಾದ್ ಮಾರಿಪಳ್ಳ, ಲತೀಫ್ ಮಲಾರ್, ಫಾಝೀಲ್ ಪೇರಿಮಾರ್, ಮುಖ್ತಾರ್ ಅಮ್ಮೆಮಾರ್, ಶರೀಫ್ ಸುಜೀರ್, ಜುಬೇರ್ ಮಾರಿಪಳ್ಳ, ಇಸ್ಮಾಯಿಲ್ ಮಾರಿಪಳ್ಳ, ರಮ್ಲಾನ್ (ಚಾಬು) ಮಾರಿಪಳ್ಳ ಪಾಡಿ, ಜಮಾತ್ ಕಮಿಟಿಯ ಗಣ್ಯರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಹಕಾರದೊಂದಿಗೆ ಯಶಸ್ವಿಯಾಗಿ ನೆರವೇರಿಸಲಾಯಿತು.

ಸ್ಥಳೀಯ ಮಸೀದಿಯ ಇಮಾಮ್ ಮಯ್ಯತ್ ನಮಾಜ್ ಹಾಗೂ ತಲ್ಖೀನ್ ಪಾರಯಣ, ದುಆ ನಿರ್ವಹಿಸಿದರು.

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಅಮ್ಟೂರಿನಲ್ಲಿ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...