ಬೆಳ್ತಂಗಡಿ: ತಾಲೂಕು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಬೆಳ್ತಂಗಡಿ ಆಸ್ಪತ್ರೆಯಲ್ಲಿ 10 ಕೊರೊನಾ ಬೆಡ್ ಇದ್ದು, 6 ಮಂದಿ ಈಗಾಗಲೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯ ಸ್ಟಾಫ್ ನರ್ಸ್ ಹಾಗೂ ಲ್ಯಾಬ್ ಸಿಬ್ಬಂದಿಗೆ ಈ ಹಿಂದೆಯೇ ಸೋಂಕು ಧೃಡಪಟ್ಟಿದ್ದು, ಈಗ ವೈದ್ಯಾಧಿಕಾರಿಗೂ ಸೋಂಕು ಇರುವುದು ಧೃಡಪಟ್ಟಿದೆ.
