ಬಂಟ್ವಾಳ: ಬಂಟ್ವಾಳ ಉಪವಿಭಾಗ ವ್ಯಾಪ್ತಿಯ ಬಂಟ್ವಾಳ ಮತ್ತು ಬೆಳ್ತಂಗಡಿ ಎರಡು ತಾಲೂಕಿನ ಪೊಲೀಸರಿಗೆ ಇಂದು ಉಚಿತ ಆರೋಗ್ಯ ತಪಾಸಣೆ ಕಾರ್ಯ ನಡೆಯಿತು.
ಕೋವಿಡ್ -19 ನ ಅವಧಿಯಲ್ಲಿ ರಾತ್ರಿ -ಹಗಲು ದುಡಿಯುತ್ತಿರುವ ಪೊಲೀಸರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಎರಡು ತಾಲೂಕಿನ ಪೊಲೀಸರನ್ನು ಠಾಣೆಯಲ್ಲಿ ಸರಕಾರಿ ವೈದ್ಯಾಧಿಕಾರಿಗಳು ತಪಾಸಣೆ ನಡೆಸಿದರು.



ಎರಡು ತಾಲೂಕಿನ ಸುಮಾರು 300 ರಷ್ಟು ಪೊಲೀಸ್ ಸಿಬ್ಬಂದಿಗಳನ್ನು ತಪಾಸಣೆ ನಡೆಸಲಿದ್ದಾರೆ.
ಈಗಾಗಲೇ ಬಂಟ್ವಾಳ ಡಿ.ವೈ.ಎಸ್.ಪಿ. ಕಚೇರಿ ಸಿಬ್ಬಂದಿಗಳು ಹಾಗೂ ನಗರ ಠಾಣಾ ಎಸ್.ಐ.ಅವಿನಾಶ್ ಮತ್ತು ಸುಮಾರು 60 ಪೊಲೀಸ್ ಸಿಬ್ಬಂದಿಗಳ ಆರೋಗ್ಯ ತಪಾಸಣೆಯನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮಾಡಿದರು.
ಬೆಳಿಗ್ಗೆ ಪುಂಜಾಲಕಟ್ಟೆ ಠಾಣಾ ಎಸ್. ಐ.ಸೌಮ್ಯ ಮತ್ತು ಠಾಣೆಯ ಸಿಬ್ಬಂದಿಗಳ ಆರೋಗ್ಯ ತಪಾಸಣೆ ನಡೆಸಲಾಗಿದೆ.












