ಬಂಟ್ವಾಳ: ಮಂಗಳೂರು ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ದೆ ಇಂದು ಸಂಜೆ ವೇಳೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ತಿಳಿಸಿದೆ.
ಆ ಮೂಲಕ ಬಂಟ್ವಾಳ ಕೇವಲ ಪೇಟೆಯಲ್ಲಿ ಮೂರು ಮಹಿಳೆ ಸಾವನ್ನಪ್ಪಿದ್ದಾರೆ.

ಬಂಟ್ವಾಳ ಪೇಟೆಯಲ್ಲಿನ ವೃದ್ದೆ ಎ.18 ರಂದು
ಆಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದು, ಅವರನ್ನು ಆರಂಭದಲ್ಲಿ ಬಂಟ್ವಾಳದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಬಳಿಕ ಅವರ ಗಂಟಲು ದ್ರವ ಪರೀಕ್ಷೆ ನಡೆಸಿದ ವೇಳೆ ಅವರಿಗೆ ಕೊರೊನ ಪಾಸಿಟಿವ್ ದೃಡಪಟ್ಟಿತ್ತು.
ಆ ಬಳಿಕ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಆದರೆ ಅವರು ಇಂದು ಸಂಜೆ ವೇಳೆ ಜಿಲ್ಲಾಡಳಿತ ಮೃತಪಟ್ಟ ಬಗ್ಗೆ ದೃಡಪಡಿಸಿದೆ.
ಈಕೆ ಎ.19 ಆದಿತ್ಯವಾರ ಮೃತಪಟ್ಟ ಮಹಿಳೆಯ ನೆರೆಮನೆಯವರು. ಬಳಿಕ ಇಂದು ಮೃತಮಹಿಳೆಯ ಮಗಳಿಗೂ ಕೊರೊನ ಪಾಸಿಟಿವ್ ದೃಡವಾಗಿತ್ತು. ಅವರು ಕೂಡಾ ಮಂಗಳೂರು ಕೋವಿಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಮೂಲಕ ಬಂಟ್ವಾಳ ಪೇಟೆಯಲ್ಲಿ ಮತ್ತಷ್ಟು ಹೆಚ್ಚಿನ ನಿಗಾ ವಹಿಸಲಾಗಿದೆ.
ಕೋವಿಡ್ ಮಹಾಮಾರಿ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆಯಲ್ಲಿ ಮೂವರು ಮಹಿಳೆಯರನ್ನು ಬಲಿ ತೆಗೆದುಕೊಂಡಿದೆ. ಬಂಟ್ವಾಳ ತಾಲ್ಲೂಕಿನ ಜನತೆ ಒಂದಷ್ಟು ಗಾಬರಿ ಪಡುವಂತೆ ಅಗಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳ ಪೇಟೆ ಹಾಗೂ ನರಿಕೊಂಬು ಗ್ರಾಮದ ನಾಯಿಲದ ಒಟ್ಟು ಇಬ್ಬರು ಮಹಿಳೆಯರು ಮಂಗಳೂರು ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

