ಬೆಂಗಳೂರು: ರಾಜ್ಯದಲ್ಲಿ ಕೊರೋನ ಸೋಂಕಿತರ ಮತ್ತು ಸಾವಿನ ಸಂಖ್ಯೆ ಏರುತ್ತಲೇ ಸಾಗಿದ್ದು ರವಿವಾರ ಒಂದೇ ದಿನ ಒಟ್ಟು ಸೋಕಿನ ಸಂಖ್ಯೆ ಎರಡು ದಶಕಗಳ ಸಮೀಪಕ್ಕೆ ತಲುಪಿದೆ.


ರವಿವಾರ ಸೋಂಕಿನಿಂದ 81 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಯ ಅವಧಿಯಲ್ಲಿ 19,067 ಮಂದಿಗೆ ಸೋಂಕು ದೃಢಪಟ್ಟಿದೆ.
ದಿನ ಕಳೆದಂತೆ ಬೆಂಗಳೂರು ನಗರ ಸಾವಿನ ನಗರವಾಗುತ್ತಿದ್ದು ರವಿವಾರ ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 60 ಮಂದಿ ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಒಟ್ಟು 11,61,065 ಪ್ರಕರಣ ದೃಢಪಟ್ಟಿದ್ದು ಒಟ್ಟು 13,351ಮಂದಿ ಮೃತಪಟ್ಟಿದ್ದಾರೆ. 1,33,543 ಸಕ್ರಿಯ ಪ್ರಕರಣಗಳಿದೆ.
ಇಂದಿನ ಸೋಂಕಿತರ ವಿವರ: ಬಾಗಲಕೋಟೆ-104, ಬಳ್ಳಾರಿ-238, ಬೆಳಗಾವಿ-129, ಬೆಂಗಳೂರು ಗ್ರಾಮಾಂತರ-245, ಬೆಂಗಳೂರು ನಗರ-12,793 ಬೀದರ್-469, ಚಾಮರಾಜನಗರ-102, ಚಿಕ್ಕಬಳ್ಳಾಪುರ-190, ಚಿಕ್ಕಮಗಳೂರು-81, ಚಿತ್ರದುರ್ಗ-102, ದಕ್ಷಿಣ ಕನ್ನಡ-272, ದಾವಣಗೆರೆ-133, ಧಾರವಾಡ-265, ಗದಗ-48, ಹಾಸನ-348, ಹಾವೇರಿ-43, ಕಲಬುರಗಿ-671, ಕೊಡಗು-44, ಕೋಲಾರ-175, ಕೊಪ್ಪಳ-65, ಮಂಡ್ಯ-338, ಮೈಸೂರು-777, ರಾಯಚೂರು-133, ರಾಮನಗರ-122, ಶಿವಮೊಗ್ಗ-156, ತುಮಕೂರು-494, ಉಡುಪಿ-152, ಉತ್ತರ ಕನ್ನಡ-104, ವಿಜಯಪುರ-200, ಯಾದಗಿರಿ-74 ಸೋಂಕಿತ ಪ್ರಕರಣ ಪತ್ತೆಯಾಗಿದೆ.












