Wednesday, January 28, 2026

“ಕೊರೋನಾ ನೇಸಲ್ ಡ್ರಾಫ್ಸ್ಸ್ ಲಸಿಕೆ”

ಈಗ ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಹಾಮಾರಿ ಕೊರೋನಾ ವೈರಾಣುವಿನಿಂದ ಹರಡುವ ಕೋವಿಡ್-19 ರೋಗದ ಎರಡನೇ ಅಲೆ ಮತ್ತಷ್ಟು ಉಗ್ರವಾಗಿ ಕಾಡುತ್ತಿರುವುದು ಬಹಳ ದು:ಖಕರವಾದ ವಿಚಾರ. ಕೋವಿಡ್-19 ರೋಗ ತಡೆಯಲು ಕೋವಿಶೀಲ್ಡ್, ಕೋವ್ಯಾಕ್ಸಿನ್ ಮುಂತಾದ ಲಸಿಕೆ ಚುಚ್ಚುಮದ್ದಿನ ರೂಪದಲ್ಲಿ ಲಭ್ಯವಿದ್ದು ನಮ್ಮ ದೇಶದಾದ್ಯಂತ ಜನರು ಈ ಚುಚ್ಚುಮದ್ದನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಈ ಚುಚ್ಚುಮದ್ದು ಹಾಕಿಸುವಾಗ ಉಂಟಾಗುವ ನೋವು ಮತ್ತು ಆತಂಕದ ಪರಿಣಾಮವಾಗಿ ಒಂದಷ್ಟು ಮಂದಿ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡುಬAದಿದೆ. ಈ ನಿಟ್ಟಿನಲ್ಲಿ ನೋವುರಹಿತವಾದ ನೇಸಲ್ ಡ್ರಾಪ್ಸ್ ಅಥವಾ ಹನಿಗಳ ರೂಪದಲ್ಲಿ ಲಸಿಕೆ ಲಭ್ಯವಾದರೆ ಇನ್ನೂ ಹಚ್ಚಿನ ಜನರು ಈ ಲಸಿಕೆ ಹಾಕಿಸಿಕೊಳ್ಳಲು ಮುಂದು ಬರಬಹುದು ಎನ್ನುವುದು ವಿಜ್ಙಾನಿಗಳ ಆಶಯವಾಗಿರುತ್ತದೆ.

ಈಗ ಸದ್ಯಕ್ಕೆ ಪೋಲಿಯೊ ವೈರಾಣು ಮತ್ತು ಇನ್‌ಪ್ಲೂಯೆಂಜಾ ಎಂಬ ವೈರಾಣುವಿಗೆ ಡ್ರಾಪ್ಸ್ ರೂಪದಲ್ಲಿ ಲಸಿಕೆ ಲಭ್ಯವಿದ್ದು,, ಇವು ಬಹಳ ಪರಿಣಾಮಕಾರಿ ಎಂದೂ ಸಾಬೀತಾಗಿದೆ. ಈ ಎರಡು ಕಾಯಿಲೆಗಳಿಗೆ ಮೊದಲು ಲಸಿಕೆ ಚುಚ್ಚುಮದ್ದಿನ ರೂಪದಲ್ಲಿ ಇತ್ತು, ಬಳಿಕ ಪೋಲಿಯೊ ರೋಗ ಬಾಯಿಯ ಮುಖಾಂತರ ಹಾಕುವ ಹನಿಗಳ ಲಸಿಕೆ ಸಿದ್ಧಪಡಿಸಿ ಯಶಸ್ಸು ಪಡೆಯಲಾಯಿತು. ಅದರ ಯಶಸ್ಸಿನ ನಂತರ ಇನ್ ಪ್ಲೊಯೆಜ್ ರೋಗಕ್ಕೆ ನೇಸಲ್ ಡ್ರಾಪ್ನ್ ತಯಾರಿಸಿ ಬಹಳಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ನಮ್ಮ ಭಾರತ ದೇಶದಲ್ಲಿ ಭಾರತ್ ಬಯೋಟಿಕ್ ಕಂಪನಿ ನೇಸಲ್ ಡ್ರಾಪ್ಸ್ ರೂಪದಲ್ಲಿ ಲಸಿಕೆ ತಯಾರಿಸಿ ಪ್ರಾಯೋಗಿಕ ಹಂತದಲ್ಲಿ ಯಶಸ್ಸು ಪಡೆದಿದೆ. ಒಂದನೇ ಹಂತದ ಟ್ರಯಲ್ಸ್ ಮುಗಿದದ್ದು ಜನರಲ್ಲಿ ಹೊಸ ಆಶಾವಾದ ಮೂಡಿಸಿದೆ, ಒಟ್ಟಿನಲ್ಲಿ ಈ ಪ್ರಯತ್ನ ಯಶಸ್ಸಿಯಾದಲ್ಲಿ ನೇಸಲ್ ಹನಿ ಮುಖಾಂತರ ಲಸಿಕೆ ಹಾಕಿಸಿಕೊಂಡು ಸೂಜಿ ಚುಚ್ಚಿನಿಕೊಳ್ಳುವ ಯಾತನೆಯನ್ನು ಮತ್ತು ಆತಂಕವನ್ನು ದೂರ ಮಾಡುವ ದಿನಗಳು ದೂರವಿಲ್ಲ.

ನೇಸಲ್ ಡ್ರಾಪ್ಸ್ ಹೇಗೆ ಕರ‍್ಯ ನಿರ್ವಹಿಸುತ್ತದೆ?
ನಮ್ಮ ದೇಹಕ್ಕೆ ಸೋಂಕು ಉಂಟುಮಾಡುವ ಎಲ್ಲಾ ವೈರಾಣುಗಳು ಮತ್ತು ಕೋವಿಡ್-19 ರೋಗ ಉಂಟುಮಾಡುವ Sಂಖ-ಅಔಗಿ-2 ವೈರಾಣು ನಮ್ಮ ದೇಹವನ್ನು ದೇಹದ ಮೂಗಿನ ಒಳ ಭಾಗದ ಮೇಲ್ಭಾಗದ ಪದರಗಳ ಮುಖಾಂತರ ಒಳಗೆ ಸೇರಿ ಜೀವಕೋಶಗಳ ಒಳಗೆ ಸೇರಿಕೊಂಡು ಸೋಂಕು ಉಂಟುಮಾಡುತ್ತದೆ. ನಾವು ಮೂಗಿನ ಮೂಲಕ ನೀಡುವ ಲಸಿಕೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಚುರುಕುಗೊಳಿಸಿ, ವೈರಾಣುವಿನ ವಿರುದ್ಧ ಹೋರಾಡಲು ಬೇಕಾದ ಪ್ರೋಟಿನ್ ಮತ್ತು ಪ್ರತಿಕಾಯಗಳು ಅಥವಾ ಆಂಟಿಬಾಡಿಯನ್ನು ಸೃಷ್ಟಿಮಾಡಿ, ವೈರಾಣುಗಳು ನಮ್ಮ ದೇಹಕ್ಕೆ ಸೇರಿಕೊಂಡಾಗ ಅದರ ವಿರುದ್ಧ ಸಮರ ಸಾರಿ, ಆ ವೈರಾಣುಗಳನ್ನು ನಾಶಪಡಿಸುತ್ತದೆ. ಅಂತಹ ವೈರಾಣುಗಳ ಸೋಂಕು ಉಂಟುಮಾಡುವ ಸಾಮರ್ಥ್ಯವನ್ನು ಕುಂದಿಸಿ, ವೈರಾಣುಗಳು ಜೀವಕೋಶಗಳ ಒಳಗೆ ಸೇರದಂತೆ ಮಾಡುತ್ತದೆ ಮತ್ತು ವೈರಾಣುಗಳ ವಂಶಾಭಿವೃದ್ದಿ ಮಾಡದಂತೆ ತಡೆಗಟ್ಟುತ್ತದೆ.

ವೈರಾಣುಗಳು ಕೇವಲ ಡಿ.ಎನ್.ಎ ಅಥವಾ ಆರ್.ಎನ್.ಎ. À ಎಂಬ ವರ್ಣತಂತುವಿನ ಒಂದು ಎಳೆಯನ್ನು ಮಾತ್ರ ಹೊಂದಿರುವ ಕಾರಣದಿಂದ ಇತರ ಪ್ರಾಣಿಯ ಜೀವಕೋಶಗಳ ಸಹಾಯವಿಲ್ಲದೆ ವಂಶಾಭಿವೃದ್ದಿ ಮಾಡಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ವೈರಾಣುವಿನ ಆರ್ಭಟ ಸೊರಗಿ ಹೋಗಿ ಅವುಗಳ ಸಂಖ್ಯೆ ಕ್ಷೀಣಿಸಿ ಅವುಗಳ ಸೋಂಕು ಉಂಟುಮಾಡುವ ಸಾಮರ್ಥ್ಯ ಕುಂದಿಸಿ ಅವುಗಳು ತಮ್ಮ ರೋಗ ಉಂಟುಮಾಡುವ ಶಕ್ತಿ ಕಳೆದುಕೊಂಡು ದೇಹದಿಂದ ಹೊರಹಾಕಲ್ಪಡುತ್ತದೆ ಮತ್ತು ರೋಗಿಗಳಿಗೆ ಯಾವುದೇ ಸೋಂಕು ಉಂಟುಮಾಡಲು ಸಾಧ್ಯವಾಗುವುದಿಲ್ಲ. ಇನ್ನು ಸೋಂಕು ಉಂಟುಮಾಡುವ ವೈರಾಣುಗಳು ದೇಹದ ಮೂಗು, ಕಣ್ಣು ಮತ್ತು ಗಂಟಲಿನಲ್ಲಿ ಹೆಚ್ಚು ಮನೆ ಮಾಡಿರುವುದರಿಂದ ಮೂಗಿನ ಮೂಲಕ ಹನಿರೂಪದ ಲಸಿಕೆ ನೀಡುವುದು ಹೆಚ್ಚು ಅರ್ಥಪೂರ್ಣ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಏನು ಲಾಭಗಳು?
1. ನೋವು ರಹಿತವಾಗಿರುತ್ತದೆ. ನೇರವಾಗಿ ಮೂಗಿನ ಹೊಳ್ಳೆಗಳ ಮುಖಾಂತರ ಹನಿಗಳ ರೂಪದಲ್ಲಿ ಲಸಿಕೆ ನೀಡಲಾಗುತ್ತದೆ.
2. ಚುಚ್ಚುಮದ್ದಿನಿಂದ ಉಂಟಾಗುವ ಸೋಂಕು, ನೋವು, ವಾತ ಮತ್ತು ಗಾಯಗಳಿಂದ ಮುಕ್ತಿ ದೊರಕುತ್ತದೆ.
3. ಚುಚ್ಚುಮದ್ದಿನಿಂದ ಉಂಟಾಗುವ ಆತಂಕ, ಉದ್ವೇಗ ಮತ್ತು ಮಾನಸಿಕ ತುಮುಲ ಕಡಿಮೆಯಾಗುತ್ತದೆ.
4. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ಬಹಳ ಸುಲ¨sವಾಗಿ ಈ ಲಸಿಕೆ ನೀಡಬಹುದು.
5. ಎರಡೆರಡು ಡೋಸ್ ಅಗತ್ಯವಿರುವುದಿಲ್ಲ. ಒಂದೇ ಡೋಸ್ ಸಾಕಾಗುತ್ತದೆ.
6. ದೇಹದ ರೋಗ ನಿರೋಧಕ ಶಕ್ತಿ ವೃದ್ದಿಸಿ, ಬಹಳ ಬೇಗ ವೈರಾಣುವಿನಿಂದ ರಕ್ಷಣೆ ನೀಡುತ್ತದೆ.
7. ಅತೀ ಕಡಿಮೆ ಪ್ರಮಾಣ ಅಂದರೆ ಸುಮಾರು 0.5mಟ ಗಳು ಮಾತ್ರ ಸಾಕಾಗುತ್ತದೆ.
8. ಕಡಿಮೆ ವೆಚ್ಚದಲ್ಲಿ ಲಸಿಕೆ ದೊರಕುತ್ತದೆ. ಇದೊಂದು ಪರಿಸರ ಸ್ನೇಹಿ ಲಸಿಕೆಯಾಗಿದ್ದು, ಇದನ್ನು ರಿಪ್ರಿಜರೇಟರ್‌ನಲ್ಲಿ ಸಂರಕ್ಷಿಸುವ ಅಗತ್ಯವಿರುವುದಿಲ್ಲ.
9. ವೈರಾಣುಗಳು ಹೆಚ್ಚು ಆಶ್ರಯ ಪಡೆಯುವ ಮೂಗಿನ ಪದರಕ್ಕೆ ನೇರವಾಗಿ ಲಸಿಕೆ ಹನಿಗಳ ರೂಪದಲ್ಲಿ ಹಾಕುವುದರಿಂದ ಚುಚ್ಚುಮದ್ದಿಗಿಂತಲೂ ಹನಿರೂಪದ ಲಸಿಕೆ ಹೆಚ್ಚು ಪರಿಣಾಮಕಾರಿ ಎಂದು ಅಂದಾಜಿಸಲಾಗಿದೆ.
10. ಮೂಗಿನ ಹನಿಗಳ ರೂಪದ ಲಸಿಕೆಯಲ್ಲಿ ಅತೀ ಕನಿಷ್ಠ ಪ್ರಮಾಣದ ಅಡ್ಡ ಪರಿಣಾಮ ಕಂಢು ಬರುತ್ತದೆ ಎಂದು ಅಂದಾಜಿಸಲಾಗಿದೆ.
11. ಅತಿ ಸರಳ ಸುಲಭ ಮತ್ತು ಯಾರು ಬೇಕಾದರೂ ಈ ಮೂಗಿನ ಹನಿ ಲಸಿಕೆಯನ್ನು ನೀಡಬಹುದಾಗಿದೆ. ಚುಚ್ಚುಮದ್ದಿನ ರೂಪದ ಲಸಿಕೆ ಹಾಕಲು ಪರಿಣಿv ದಾದಿಯರು ಅಥವಾ ವೈದ್ಯರ ಅನಿವರ‍್ಯತೆ ಇರುತ್ತದೆ.
12. ನೇರವಾಗಿ ಮೂಗಿನ ಪದರಕ್ಕೆ ಈ ಲಸಿಕೆ ಹನಿ ನೀಡುವುದರಿಂದ ತಕ್ಷಣವೇ ದೇಹದ ರಕ್ಷಣಾ ಪ್ರಕ್ರಿಯೆಯನ್ನು ಚುರುಕಾಗಿಸಿ, ವೈರಾಣುವಿನ ವಿರುದ್ಧ ಪ್ರತಿಬಂಧಕ ಪ್ರತಿಕ್ರಿಯೆಗಳನ್ನು ಸೃಷ್ಟಿ ಮಾಡಿ ಬಹಳ ಬೇಗನೆ ಪರಿಣಾಮಕಾರಿ ರಕ್ಷಣೆಯನ್ನು ನೀಡುತ್ತದೆ.

ಕೊನೆ ಮಾತು
ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ನಿಂತ ನೀರಲ್ಲಿ ಹೇಗೆ ಕ್ರಿಮಿಕೀಟಗಳು ಬೆಳೆಯುತ್ತದೆಯೋ, ಹಾಗೆ ವೈದ್ಯಕೀಯ ಕ್ಷೇತ್ರ ಕೂಡಾ ನಿಂತ ನೀರಾಗಬಾರದು. ನಿರಂತರವಾದ ಅನ್ವೇಷಣೆ, ಸಂಶೋಧನೆ ನಡೆದಲ್ಲಿ ಮಾತ್ರ ವೈರಾಣು ಮತ್ತು ಬ್ಯಾಕ್ಟೀರಿಯಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಬದಲಾದ ಪರಿಸರ ಮತ್ತು ಪ್ರತಿಕೂಲ ಸನ್ನಿವೇಶಗಳಿಗೆ ಪೂರಕವಾಗಿ ವೈರಾಣುಗಳು ರೂಪಾಂತರಗೊAಡು, ಬದುಕುವ ಕಲೆಯನ್ನು ಕರಗತಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ವೈದ್ಯರು ಮತ್ತು ವಿಜ್ಞಾನಿಗಳು ನಿರಂತರವಾಗಿ ಅಧ್ಯಯನಶೀಲರಾಗಿ, ಹೊಸ ಹೊಸ ತಂತ್ರಜ್ಞ್ಞಾನಗಳನ್ನು ಬಳಸಿಕೊಂಡು ಹೊಸ ಆವಿಷ್ಕಾರಗಳನ್ನು ಮಾಡುತ್ತಿರಲೇಬೇಕಾದ ಅನಿವರ‍್ಯ ಕಾಲಘಟ್ಟದಲ್ಲಿ ನಾವಿಂದು ನಿಂತಿದ್ದೇವೆ.

ಕಣ್ಣಿಗೆ ಕಾಣದ ಸೂಕ್ಷಾö್ಮಣು ಸೂಕ್ಷö್ಮ ವೈರಾಣುವೊಂದು ಕಳೆದ ಒಂದು ವರ್ಷದಿಂದ ನಮ್ಮ ಮನುಕುಲವನ್ನು ಹಿಂಡಿಹಿಪ್ಪೆ ಮಾಡಿ ಮಾನವನನ್ನು ಹೈರಾಣಾಗಿಸಿರುವುದು ನಮಗೆಲ್ಲ ತಿಳಿದೇ ಇದೆ. ವೈದ್ಯರು ಮತ್ತು ವಿಜ್ಞಾನಿಗಳು ಸಕಾಲದಲ್ಲಿ ಎಚ್ಚೆತ್ತುಕೊಂಡು ‘ಲಸಿಕೆ’ ಉತ್ಪಾದಿಸಿಕೊಂಡು ವೈರಾಣುವಿನಿಂದ ರಕ್ಷಣೆ ಪಡೆದಿರುವುದು ಬಹಳ ಸಂತಸದ ವಿಚಾರ. ಇದೀಗ ನೇಸಲ್ ಡ್ರಾಪ್ಸ್ ಅಥವಾ ಹನಿರೂಪದ ಲಸಿಕೆ ತಯಾರಾಗುತ್ತಿರುವುದು ಜನರಲ್ಲಿ ಮತ್ತಷ್ಟು ಆತ್ಮವಿಶ್ವಾಸ ಮತ್ತು ನೆಮ್ಮದಿಯನ್ನು ವೃದ್ದಿಸಿದೆ. ಇನ್ನೂ ಪ್ರಯೋಗಾತ್ಮಕ ಹಂತದಲ್ಲಿ ಇರುವ ಈ ಹನಿರೂಪದ ಲಸಿಕೆ ಯಶಸ್ವಿಯಾಗಿ, ಮನುಕುಲವನ್ನು ವೈರಾಣುವಿನ ಕಪಿಮುಷ್ಠಿಯಿಂದ ರಕ್ಷಿಸಿ ಒಂದು ಸುದೃಢÀ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಆಗಲಿ ಎಂದು ತುಂಬು ಹೃದಯದಿಂದ ಹಾರೈಸೋಣ.

ಡಾ|| ಮುರಲೀ ಮೋಹನ್ ಚೂಂತಾರು

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...