ಬೆಂಗಳೂರು: ರಾಜ್ಯದಲ್ಲಿ ಏಳು ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಆ ಮೂಲಕ ರಾಜ್ಯದ ಒಟ್ಟಾರೆ ಸೋಂಕಿತರ ಸಂಖ್ಯೆ 425ಕ್ಕೆ ಏರಿದೆ.
ಬುಧವಾರ ಮಧ್ಯಾಹ್ನದವರೆಗಿನ ಮಾಹಿತಿಯಂತೆ ಬೆಂಗಳೂರಿನ ಇಬ್ಬರು, ಕಲಬುರಗಿಯ ಐವರಿಗೆ ಸೋಂಕು ತಗುಲಿದೆ ಎಂದು ಮಾಹಿತಿ ನೀಡಿದೆ.

ರಾಜ್ಯದಲ್ಲಿ ನಿನ್ನೆಯಿಂದ ಇಂದು ಮಧ್ಯಾಹ್ನದವರೆಗೆ 7 ಹೊಸ ಕೋವಿಡ್-19 ಪ್ರಕರಣಗಳು ದೃಡಪಟ್ಟಿದ್ದು, ಸೊಂಕಿತರ ಸಂಖ್ಯೆ 425ಕ್ಕೆ ಏರಿದೆ. ಈವರೆಗೆ 129 ಜನರು ಗುಣಮುಖರಾಗಿದ್ದು, 17 ಜನರು ಮೃತಪಟ್ಟಿದ್ದಾರೆ.
ಇಂದು ಬೆಂಗಳೂರಿನ 54 ವರ್ಷದ ಪುರುಷ ಹಾಗೂ 28 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ.
ಕಲಬುರಗಿಯಲ್ಲಿ ಮತ್ತೆ ಐವರಿಗೆ ಸೋಂಕು ತಗುಲಿದ್ದು, ಇದರಲ್ಲಿ 35, 46 ಹಾಗೂ 26 ವರ್ಷದ ಮೂವರು ಮಹಿಳೆಯರು ಹಾಗೂ 57 ವರ್ಷದ ಪುರುಷ ಸೇರಿದ್ದಾರೆ.
ಇದಲ್ಲದೆ ಕಲಬುರಗಿಯಲ್ಲಿ ನಾಲ್ಕು ತಿಂಗಳ ಮಗುವಿಗೆ ಕೋವಿಡ್ ಮಹಾಮಾರಿ ತಗುಲಿದ್ದು, ಇದೊಂದು ಆತಂಕಕಾರಿ ಬೆಳವಣಿಗೆ ಎಂದು ಹೇಳಲಾಗಿದೆ.
ದಿನದಿಂದ ದಿನಕ್ಕೆ ಸೊಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದು, ರಾಜ್ಯದ ಜನತೆಯಲ್ಲಿ ಭಯ ಉಂಟಾಗಿದೆ.

