ಬಂಟ್ವಾಳ: ಬಂಟ್ವಾಳ ತಾಲೂಕಿನ
ಸಂಗಬೆಟ್ಟು ಗ್ರಾಮದ ಕಲ್ಕುರಿ ಎಂಬಲ್ಲಿ ವಿದೇಶದಿಂದ ಬಂದ ಮಹಿಳೆ ಮನೆಗೆ ಅಶಾ ಕಾರ್ಯಕರ್ತೆ ಮತ್ತು ಆರೋಗ್ಯ ಸಹಾಯಕಿ ಬೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಇವರಿಗೆಲ್ಲಾ ಸರಕಾರಿ ಕರ್ತವ್ಯ ಕ್ಕೆ ಅಡ್ಡಿಪಡಿಸಿ ಮೊಬೈಲ್ ಕಿತ್ತುಕೊಂಡು.
ಅವಚ್ಯ ಶಬ್ದಗಳಿಂದ ಬೈದು ಕಳಿಸಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ ಘಟನೆಯಿಂದ ಸ್ಥಳೀಯರು ಆತಂಕಗೊಂಡಿದ್ದು ಈ ಬಗ್ಗೆ ಇಲಾಖೆ ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದೆ.
ಆರೋಗ್ಯ ಇಲಾಖೆ ಹಾಗೂ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮಕ್ಕೆ ಮತ್ತು ಇಂತಹ ಸನ್ನಿವೇಶದಲ್ಲಿ ಸಂಶಯಿತರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸುತ್ತಿದೆ.
ಇವರ ಕಾರ್ಯಕ್ಕೆ ಸಾರ್ವಜನಿಕರ ಸಹಕಾರ ಅತೀ ಅಗತ್ಯ ವಿದೆ.

ಆರೋಗ್ಯ ಇಲಾಖೆಯ ಸಿಬ್ವಂದಿಗಳಿಗೆ ಈ ರೀತಿಯಲ್ಲಿ ಬೆದರಿಕೆ ಬಂದರೆ ಜಿಲ್ಲಾಡಳಿತ
ತಾಲೂಕು ಆಡಳಿತ ಯಾರ ಆದೇಶ ವಿಲ್ಲ ದೆ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಸೂಚನೆ ನೀಡಿದೆ.
ಘಟನೆ ನಡೆದ ತಕ್ಷಣ ಇಲಾಖೆ ಯ ಸಿಬ್ಬಂದಿ ಗಳು ಸ್ಥಳೀಯ ಪೋಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಕೊರೊನೊ ವೈರಸ್ ನ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲಗಳಿದ್ದು ಇದರ ತಡೆಗೆ ಇಲಾಖೆ ಸಾಹಸ ಮಾಡುತ್ತಿದೆ.
ಆದರೆ ಇಲಾಖೆ ಯ ಜೊತೆ ಕೊರೊನೊ ಜಾಗೃತಿಗಾಗಿ ಎಲ್ಲರ ಸಹಕಾರ ಅತೀ ಅಗತ್ಯ ವಾಗಿ ಬೇಕಾಗಿದೆ.

