ಬಂಟ್ವಾಳ: ಮಂಗಳೂರು ವೆನ್ಲಾಕ್ ಆಸ್ಪತ್ರೆಯಿಂದ ತಪ್ಪಿಸಿದ ವ್ಯಕ್ತಿ ಬಂಟ್ವಾಳದ ಗ್ರಾಮವೊಂದಕ್ಕೆ ಆಗಮಿಸಿದ್ದು , ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ತಪಸಣಾ ಕಾರ್ಯಗಳು ನಡೆಯುತ್ತಿದ್ದು, ರವಿವಾರ ವಿದೇಶದಿಂದ ಬಂದಿರುವ ವ್ಯಕ್ತಿಯೋರ್ವನಲ್ಲಿ ಜ್ವರದ ಲಕ್ಣಣಗಳು ಕಂಡು ಬಂದಿತ್ತು.

ವಿದೇಶದಿಂದ ಆಗಮಿಸಿದ ವ್ಯಕ್ತಿಯೋರ್ವನಿಗೆ ಜ್ವರದ ಹಿನ್ನೆಲೆಯಲ್ಲಿ ಆತನ ಹೆಚ್ಚಿನ ತಪಾಸಣೆ ಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಆದರೆ ಆತ ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದು ಆತನ ಪತ್ತೆ ಕಾರ್ಯಚರಣೆ ನಡೆಯುತ್ತಿದೆ.
ಆದರೆ ಬಂಟ್ವಾಳದ ಯಾವುದೇ ಆಸ್ಪತ್ರೆಯಲ್ಲಿ ದಾಖಲಾದ ಬಗ್ಗೆ ಮಾಹಿತಿ ಎಂಬ ಸ್ಪಷ್ಟನೆಯನ್ನು ಇಲ್ಲಿನ ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ತಿಳಿಸಿದ್ದಾರೆ.
ಬಂಟ್ವಾಳ ತಾಲೂಕಿನ ಯಾವ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದ ಎಂಬ ಬಗ್ಗೆಯೂ ನಿಖರವಾದ ಮಾಹಿತಿ ಲಭ್ಯವಾಗಿಲ್ಲ.
ಆದರೆ ಆತ ಮಂಗಳೂರಿನಿಂದ ತಪ್ಪಿಸಿಕೊಂಡು ಬಂಟ್ವಾಳದ ಸಂಬಂಧಿಕರ ಮನೆಯೊಂದಕ್ಕೆ ಬಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಕೊರೊನೊ ವೈರಸ್ ಹರಡದಂತೆ ದ.ಕ.ಜಿಲ್ಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮಗಳು ಮುಂದುವರಿದಿದೆ.
ಕುರ್ನಾಡು ಅಥವಾ ವಿಟ್ಲ ಕಡೆಯ ಸಂಬಂಧಿಕರ ಮನೆಯಲ್ಲಿ ರಾತ್ರಿ ತಂಗಿದ್ದಾನೆ ಎಂಬ ಮಾಹಿತಿ ಆರೋಗ್ಯ ಇಲಾಖೆಗೆ ಲಭ್ಯವಾಗಿದ್ದು, ತನಿಖೆ ನಡೆಸಲು ಮುಂದಾಗಿದ್ದಾರೆ.
ಈಗಾಗಲೇ ವಿಟ್ಲ ಮತ್ತು ಕೋಣಾಜೆ ಪೋಲೀಸ್ ಠಾಣೆ ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು ಪತ್ತೆ ಕಾರ್ಯಕ್ಕೆ ಮತ್ತು ಪ್ರಕರಣ ದಾಖಲಿಸಲು ಸೂಚನೆ ನೀಡಿದೆ.

