ಬಂಟ್ವಾಳ: ಜಗತ್ತಿನ ನಿದ್ದೆ ಕೆಡಿಸಿದ ಕೊರೋನ ವೈರಸ್ ನ ಬಗ್ಗೆ ಕಳೆದ 31 ವರ್ಷಗಳ ಹಿಂದೆಯೆ ತರಂಗದಲ್ಲಿ ಪ್ರಕಟಗೊಂಡ ಪೇಪರ್ ಕಟ್ಟಿಂಗ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.


ಕೊರೋನ ವೈರಸ್ ಬಗ್ಗೆ 1989ರಲ್ಲಿಯೇ ತರಂಗದಲ್ಲಿ ಪ್ರಕಟಗೊಂಡ ಲೇಖನ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿದೆ.
ಈ ವೈರಸ್ ಸಂತಾನ ಬೆಳೆಸಿಕೊಳ್ಳಬೇಕಾದರೆ ಮನುಷ್ಯನ ಜೀವಕೋಶ ಸೇರಲೇಬೇಕು ಎಂಬ ವಿಚಾರಗಳನ್ನು ಅಂದು ತಿಳಿಸಿದ್ದಾರೆ.
ದೇಹದ ಪ್ರತಿರೋಧ ವ್ಯವಸ್ಥೆಗೂ ಅಹಾರ ಪೋಷಕಾಂಶಗಳಿಗೂ, ಮನಸ್ಥಿತಿಗೂ ಸಂಬಂಧವಿದೆ ಎಂದು ಉಲ್ಲೇಖ ಮಾಡಲಾಗಿದೆ.
ಹಾಗಾಗಿ ಈ ವೈರಸ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಳೆದ ಮೂವತ್ತು ವರ್ಷಗಳ ಹಿಂದೆ ಪತ್ರಿಕೆ ಪ್ರಕಟಗೊಳಿಸಿತ್ತು ಎಂಬುದು ಅಚ್ಚರಿ ಮೂಡಿಸುತ್ತದೆ.












