ಬಂಟ್ವಾಳ: ಕೊರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಕಚೇರಿಯಲ್ಲಿನ ಬಯೋ ಮೆಟ್ರಿಕ್ ಸಿಸ್ಟಮ್ ಅನ್ನು ತೆಗೆದು ಹಾಕಲು ಸರಕಾರ ಆದೇಶ ಮಾಡಿದೆ.
ಅದರೆ ಬಡವರಿಗೆ ಸರಕಾರದಿಂದ ಸಿಗುವ ರೇಷನ್ ಪಡೆಯಬೇಕಾದರೆ ರೇಷನ್ ಅಂಗಡಿಗಳಲ್ಲಿ ಬಯೋಮೆಟ್ರಿಕ್ ಮೂಲಕ ಮಾತ್ರ ಸಾಧ್ಯ.
ಪ್ರಸ್ತುತ ಎಲ್ಲೆಡೆ ಮಾರಣಾಂತಿಕ ಸಾಂಕ್ರಮಿಕ ಕೊರೊನಾ ವೈರಸ್ ಭೀತಿಯಿಂದ ನಲುಗುತ್ತಿರುವ ಸಂದರ್ಭದಲ್ಲಿ ಸರಕಾರ ರೇಷನ್ ಅಂಗಡಿಗಳಲ್ಲಿನ ಬಯೋಮೆಟ್ರಿಕ್ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ಒತ್ತಾಯಗಳು ಕೇಳಿ ಬರುತ್ತಿದೆ.


ಆಧಾರ್ ನೊಂದಣಿಗೂ ಬಯೋಮೆಟ್ರಿಕ್:
ಆಧಾರ್ ಕಾರ್ಡ್ ನೊಂದಣಿ ಮಾಡಬೇಕಾದರೆ ಅಲ್ಲೂ ಬಯೋಮೆಟ್ರಿಕ್ ವ್ಯವಸ್ಥೆ ಇರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಅಲ್ಲಿಯೂ ಕೊರೊನೊ ಭೀತಿ ಎದುರಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಎರಡು ವ್ಯವಸ್ಥೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಗಳು ಕೇಳುತ್ತಿದೆ.
ಜಿಲ್ಲಾಧಿಕಾರಿಯ ಗಮನ ಸೆಳೆದ ತಹಶೀಲ್ದಾರ್ ರಶ್ಮಿ ಎಸ್. ಆರ್.
ರೇಷನ್ ಅಂಗಡಿಯಲ್ಲಿನ ಬಯೋಮೆಟ್ರಿಕ್ ಹಾಗೂ ಆಧಾರ್ ಕಾರ್ಡ್ ಸಂಬಂಧ ಬಯೋಮೆಟ್ರಿಕ್ ವಿಚಾರವನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಜಿಲ್ಲಾಧಿಕಾರಿ ಸಿಂದೂ ರೂಪೇಶ್ ಅವರ ಗಮನಕ್ಕೆ ತಂದಿದ್ದು, ಅವರು ಸರಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.












