ಬಂಟ್ವಾಳ: ಜಿಲ್ಲಾಧಿಕಾರಿಯವರ ನಡವಳಿಯಂತೆ ಕೋವಿಡ್-19 ನ ಕುರಿತು ಹೆಚ್ಚುವರಿಯಾಗಿ ತಾಲ್ಲೂಕು ಆಡಳಿತ ವತಿಯಿಂದ ತಹಶೀಲ್ಧಾರ್ ಬಂಟ್ವಾಳ ಅವರ ಕಚೇರಿಯಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದ್ದು, ದೂರವಾಣಿ ಸಂಖ್ಯೆ 08255- 232120 ಕ್ಕೆ ಸಾರ್ವಜನಿಕರು ಕರೆ ಮಾಡಬಹುದಾಗಿದೆ. ಮಾ. 31ರ ಮಧ್ಯ ರಾತ್ರಿಯವರೆಗೆ 24 ಗಂಟೆಯಲ್ಲಿ ನಿರಂತರ ಸೇವೆಯಲ್ಲಿ ತೊಡಗಿಸಲಾಗಿದೆ.

ಜಿಲ್ಲಾ ವಿಪತ್ತು ನಿರ್ವಹಣಾ ಘಟಕ ಕಂಟ್ರೋಲ್ ರೂಂ(24*7) ಟೋಲ್ ಫ್ರೀ ನಂಬರ್ 1077, 24*7 ಉಚಿತ ಅರೋಗ್ಯ ಸಹಾಯವಾಣಿ 104 ಮತ್ತು 080-22208541 ಅಥವಾ ಕೇಂದ್ರ ಅರೋಗ್ಯ ಸಚಿವಾಲಯದ 24*7 ಉಚಿತ ಅರೋಗ್ಯ ಸಹಾಯವಾಣಿ +91-11-23978046 ಅಥವಾ ಇಮೇಲ್ – [email protected] ಸಂಪರ್ಕಿಸಬಹುದು. ಆದುದರಿಂದ ಕೊರೋನಾ ಸೋಂಕು ಸಂಬಂದಿಸಿದ ರೋಗ ಲಕ್ಷಣಗಳು ಕಂಡು ಬಂದಲ್ಲಿ ಸಾರ್ವಜನಿಕರು ಮೇಲಿನ ದೂರವಾಣಿ ಕೇಂದ್ರಗಳನ್ನು ಸಂಪರ್ಕಿಸಬಹುದು. ಹೆಚ್ಚುವರಿಯಾಗಿ ಈ ಕಚೇರಿಯ ಕಂಟ್ರೋಲ್ ರೂಂ ಅನ್ನು ಕೂಡ ಸಂಪರ್ಕಿಸಬಹುದು. ಆ ತಕ್ಷಣ ಸೇವೆಗೆ ವ್ಯವಸ್ಥೆಯನ್ನು ತಾಲ್ಲೂಕು ಆಡಳಿತವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ಧಾರ್ ತಿಳಿಸಿದ್ದಾರೆ.

