Tuesday, July 15, 2025

ಬ್ಲಾಕ್ ಕಾಂಗ್ರೆಸ್ ವತಿಯಿಂದ ಸ್ವಾತಂತ್ರ್ಯ ಆಚರಣೆ

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ 73 ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಯವರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿ 72 ವರ್ಷಗಳ
ಹಿಂದೆ ನಮ್ಮ ದೇಶದ ಸ್ವಾತಂತ್ರ್ಯದ ಚಳುವಳಿಯಲ್ಲಿ ಭಾಗವಹಿಸಿದ ಮಹಣಿಯರ ತ್ಯಾಗ ಬಲಿದಾನವನ್ನು ಸ್ಮರಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಬಾಗಿಯಾದ ಮಹಾಣಿಯರ ಬಗ್ಗೆ ಅವಹೇಳನ ಮಾಡುವುದನ್ನು ಸಹಿಸಲು ಸಾದ್ಯವಿಲ್ಲ ನಾವೆಲ್ಲರೂ
ಒಗ್ಗಟ್ಟಾಗಿ ಬಲಿಷ್ಠ ಬಾರತವನ್ನು ಕಟ್ಟಲು ಪಣತೊಡೋಣ ಎಂದರು. ಸಾರ್ವಜನಿಕರಿಗೆ ಸಿಹಿ ತಿಂಡಿ ಹಂಚುವ ಮೂಲಕ
ಸಂಭ್ರಮಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾದ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್
ಅದ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಎ.ಪಿ.ಎಂ.ಸಿ ಅದ್ಯಕ್ಷರಾದ ಪದ್ಮನಾಭ ರೈ, ಪುರಸಭೆ ಸದಸ್ಯರಾದ ಗಂಗಾಧರ ಪೂಜಾರಿ,
ಮುಖಂಡರಾದ ಮೋಹನ್ ಗೌಡ ಕಲ್ಮಂಜ, ಚಿತ್ತರಾಂಜನ್ ಶೆಟ್ಟಿ, ವಿಶ್ವನಾಥ ಪೂಜಾರಿ ದೆಚ್ಚಾರು, ಪ್ರವೀಣ್ ಕಿಣಿ, ವೆಂಕಪ್ಪ
ಪೂಜಾರಿ, ಅಮ್ಮು ಅರಬ್ಬಿ ಗುಡ್ಡೆ, ಮಹಾಬಲ ಬಂಗೇರಾ, ಪ್ರಕಾಶ್ ಅರಬ್ಬಿ ಗುಡ್ಡೆ, ಡೆನ್ಜಿಲ್ ಹರ್ಮನ್ ನೊರೊನ್ನಾ, ಚಿಕ್ಕ ಅರಬ್ಬಿ
ಗುಡ್ಡೆ ಉಪಸ್ಥಿತರಿದ್ದರು.

More from the blog

ನಿರಂತರ ಮಳೆ : ಬಂಟ್ವಾಳ ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ದಿನಾಂಕ 15.07.2025ರಂದು ರಜೆ ಘೋಷಿಸಲಾಗಿದೆ ಎಂದು ತಹಶೀಲ್ದಾರ್...

ಒಡಿಯೂರು ಶ್ರೀ ಜನ್ಮದಿನೋತ್ಸವ ಸೇವಾ ಸಂಭ್ರಮದ ಅಂಗವಾಗಿ ಬೃಹತ್ ಉಚಿತ ವೈದ್ಯಕೀಯ ಶಿಬಿರ

ವಿಟ್ಲ : ನಮ್ಮ ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಬದುಕಿನ ಉತ್ತುಂಗಕ್ಕೆ ಕಾರಣವಾಗುತ್ತದೆ. ಬದುಕು ಪೂರ್ತಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಋತುವಿಗನುಗುಣವಾಗಿ ಹಿತ, ಮಿತ ಆಹಾರ ಸೇವಿಸಿದಾಗ ಉತ್ತಮ ಆರೋಗ್ಯ ಪಡೆಯಬಹುದು...

ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು ನಡೆಯಲು ಸಾಧ್ಯ- ಮಾಣಿಲಶ್ರೀ

ವಿಟ್ಲ: ನಮ್ಮ ಕಣ್ಣುಗಳಿಗೆ ಕಾಣದಿರುವ ಶಕ್ತಿಯೇ ದೇವರು. ದೇವರನ್ನು ಬಿಟ್ಟು ನಾವು ಯಾವ ಕಾರ್ಯವನ್ನೂ ಮಾಡಿದರೂ ನಿಷ್ಪ್ರಯೋಜಕ. ಉಸಿರು ಇದ್ದಷ್ಟು ದಿನ ಲೋಕಹಿತ ಕಾರ್ಯ ಮಾಡಬೇಕು. ಧನಾತ್ಮಕ ಚಿಂತನೆಗಳಿಂದ ಮಾತ್ರ ಉತ್ತಮ ಕಾರ್ಯಗಳು...

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ...