Thursday, June 26, 2025

ಪಕ್ಷದ ಕಾರ್ಯಕರ್ತರ ಋಣವನ್ನು ಜನ್ಮ ಜನ್ಮಾಂತರದಲ್ಲಿ ಮರೆಯಲಾರೆ: ಬಿ ರಮಾನಾಥ ರೈ

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಣಿನಾಲ್ಕೂರು ಗ್ರಾಮ ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರುಗಳ ಮನೆ ಭೇಟಿ ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮವು ಮಾಜಿ ಸಚಿವ ಶ್ರೀ ಬಿ ರಮಾನಾಥ ರೈಯವರ ಮಾರ್ಗದರ್ಶನದಲ್ಲಿ ನಡೆಯಿತು. ಬೂತ್ ಅಧ್ಯಕ್ಷರ ನಿವಾಸದಲ್ಲಿ ತೆಂಗಿನ ಸಸಿ ನೆಟ್ಟು ಕಾಂಗ್ರೆಸ್ ಪಕ್ಷ ಕಲ್ಪವೃಕ್ಷ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಂಗ್ರೆಸ್ ಪಕ್ಷವು ಎಲ್ಲಾ ವರ್ಗದ ಜನರ ಸರ್ವತೋಮಖ ಅಭಿವೃದ್ಧಿಗೆ ಕಾರಣಿಭೂತರಾಗಿ ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ನಾಯಕರ ಪಾತ್ರ ಬಹಳ ಪ್ರಾಮುಖ್ಯವಾಗಿತ್ತು ಎಂದರು. ನನ್ನನ್ನು ಬಂಟ್ವಾಳ ಕ್ಷೇತ್ರದ ಶಾಸಕನನ್ನಾಗಿ ಮಾಡಿದ ಪಕ್ಷದ ಕಾರ್ಯಕರ್ತರ ಋಣವನ್ನು ಜನ್ಮಜನ್ಮಾಂತರದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸುತ್ತಾ ಗದ್ಗರಿತರಾದರು. ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಭವಿಷತ್ತಿನಲ್ಲಿ ಪಕ್ಷದ ಕಾರ್ಯಕರ್ತರ ಕಾರ್ಯವೈಖರಿಯನ್ನು ಪರಿಗಣಿಸಿ ಹಾಗೂ ಗುರುತಿಸಿ ಗೌರವಿಸುವ ಕಾರ್ಯಕ್ಕೆ ಒತ್ತು ಕೊಡಲಾಗುವುದು ಎಂದರು. ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಎನ್ ಆದಂ ಕುಂಞ, ಬೂತ್ ಅಧ್ಯಕ್ಷರಾದ ಪೂವಪ್ಪ ಪೂಜಾರಿ ಅಗ್ಯೆಚಾರು, ಅಜಯ್ ಮೋರಸ್, ವಿಶ್ವನಾಥ ಪೂಜಾರಿ ನೇಲ್ಯಪಲ್ಕೆ, ನವೀನ್ ಪೂಜಾರಿ ಕೊಡಂಗೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸಂಪತ್ ಕುಮಾರ್ ಶೆಟ್ಟಿ, ಪಂಚಾಯತ್ ಉಪಾಧ್ಯಕ್ಷರಾದ ಗೀತಾ ಅರಿಪಾಡಿ, ಪಂಚಾಯತ್ ಸದಸ್ಯರಾದ ಕಂಚಲಾಕ್ಷಿ, ಪ್ರೆಸಿಲ್ಲಾ, ಯೋಗೀಶ್ ಶೆಟ್ಟಿ, ಪ್ರೇಮ, ವಿಮಲ, ಫಾರೂಕ್ ಜಿ, ಶಿವಪ್ಪ ಪೂಜಾರಿ, ಮುಖಂಡರಾದ ವಿಶ್ವನಾಥ ಶೆಟ್ಟಿ ಕೊಳಂಬೆ, ಡೆನ್ನಿಸ್ ಮೋರಸ್, ಬಾಲಕೃಷ್ಣ ಪೂಜಾರಿ ಕೊಟ್ಟಿಂಜ, ಶ್ರೀಧರ ಪೂಜಾರಿ, ಶಿವರಾಮ ಶೆಟ್ಟಿ ದೋಟ, ಅಬ್ಬಾಸ್ ಅಂತರ, ಮೋಹನ್ ಕೊಲ್ಯ, ತಿಮ್ಮಪ್ಪ ಪೂಜಾರಿ ಕೊಡಂಗೆ, ನಿಖಿಲ್ ಶೆಟ್ಟಿ, ಸಾಹುಲ್ ಹಮೀದ್, ಅಬ್ದುಲ್ ಹಮೀದ್, ದಾವೂದ್, ಇಬ್ರಾಹಿಮ್ ಅಬ್ಬಾಸ್ ಕುಂಡೇವು ಮತ್ತಿತರರು ಉಪಸ್ಥಿತರಿದ್ದರು.

More from the blog

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...