ಬಂಟ್ವಾಳ: ಬಂಟ್ವಾಳ ಶಾಸಕರು ಬಿಜೆಪಿ ರೈತ ಮೋರ್ಚಾ ಸಮಾವೇಶದಲ್ಲಿ ರೈತರನ್ನು ದಂದೆಕೋರರು ಎಂದು ತೋಜೋವಧೆ ಮಾಡಿದ್ದು ಇದನ್ನು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ತೀವ್ರವಾಗಿ ಖಂಡಿಸುತ್ತಿದೆ ಎಂದು ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಮೋಹನ್ ಗೌಡ ಹೇಳಿದ್ದಾರೆ.

ಅವರು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕ ವತಿಯಿಂದ, ಪಾಣೆಮಂಗಳೂರು, ಬಂಟ್ವಾಳ ಕಾಂಗ್ರೇಸ್ ಸಂಯುಕ್ತ ಆಶ್ರಯದಲ್ಲಿ ಬಿ.ಸಿ.ರೋಡ್ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.
ರೈತರನ್ನು ಅವಮಾನ ಮಾಡಿದ ಶಾಸಕರ ಪದಬಳಕೆಯನ್ನು ಖಂಡಿಸುತ್ತೇವೆ. ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ರಾಜ್ಯ ಕೇಂದ್ರ ಸರಕಾರ ಯವುದೇ ಸ್ಪಂದನೆ ನೀಡಿಲ್ಲ. ಕೇಂದ್ರ ಸರಕಾರದ ದಂದೆಕೋರ ಮನೋಸ್ಥಿತಿಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದರು.
ರೈತರ ಹಿತ ಕಾಪಾಡಲು ಕಾಂಗ್ರೇಸ್ ಸರಕಾರ ಮಾತ್ರ ಬದ್ದವಾಗಿದೆ. ಅನೇಕ ರೈತ ಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಕಾಂಗ್ರೇಸ್ ಸರಕಾರಕ್ಕೆ ಸಲ್ಲುತ್ತದೆ. ರಾಜ್ಯ ಮತ್ತು ಕೇಂದ್ರದಲ್ಲಿ ದಂದೆಕೋರ ಸರಕಾರ ಇದೆ. ತೆರಿಗೆ ವಂಚನೆ ಮಾಡುವವರ ಪರ ಸರಕಾರ ನಿಂತಿದೆ ಎಂದು ಆರೋಪಿಸಿದರು.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರ ಸರಕಾರ ದಂದೆ ಮಾಡುತ್ತಿದೆ. ಪೆಟ್ರೋಲಿಯಂ ಕಚ್ಚಾ ವಸ್ತಗಳ ಬೆಲೆ ಏರಿಕೆಯಿಂದ ಕೃಷಿ ಸಂಬಂಧಿಸಿದ ವಸ್ತು ಗಳ ಬೆಲೆ ಏರಿಕೆಯಾಗಿದೆ. ಇದರ ವಿಚಾರ ತಿಳಿದುಕೊಂಡು ಶಾಸಕರು ಮಾತನಾಡಬೇಕಾಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಅದಾನಿ ಕಂಪೆನಿಯ ಹೈ ಪವರ್ ವಿದ್ಯುತ್ ಲೈನ್ ಸಂಪರ್ಕ ಕೃಷಿ ಭೂಮಿಯ ಮೇಲೆ ಹಾದುಹೋದರೆ ಅನೇಕ ಕೃಷಿಕರ ಜೀವನ ನರಕವಾಗುತ್ತದೆ. ಈ ಬಗ್ಗೆ ಶಾಸಕರ ನಿಲುವು ತಿಳಿಸಲಿ ಎಂದರು.
ರೈತರ ಭೂಮಿಯನ್ನು ಕಾರ್ಪೋರೆಟ್ ಗಳಿಗೆ ಮಾರಾಟ ಮಾಡುವ ಕೇಂದ್ರ ಸರಕಾರ ದಂಗೆಕೋರರೇ? ಅಥವಾ ನ್ಯಾಯಕ್ಕಾಗಿ ಹೋರಾಟ ಮಾಡುವ ರೈತರು ದಂದೆಕೋರರಾ? ಎಂದು ಅವರು ಪ್ರಶ್ನಿಸಿದರು.
ಶಾಸಕರು ರೈತ ಪರ ವಾದರೆ ಕೃಷಿ ಮಸೂದೆಯನ್ನು ವಿರೋಧ ಮಾಡಿ ನಮ್ಮ ಜೊತೆ ಹೋರಾಟದಲ್ಲಿ ಭಾಗಿಯಾಗಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪಾಣೆಮಂಗಳೂರು ಬ್ಲಕಾ್ ಕಾಂಗ್ರೇಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಕಿಸಾನ್ ಘಟಕದ ಪ್ರಮುಖರಾದ ಸದಾನಂದ ಶೆಟ್ಟಿ, ಸೋಮೇಶೇಖರ್ ಗೌಡ, ಪುಸರಭಾ ಸದಸ್ಯ ಜನಾರ್ದನ ಚೆಂಡ್ತಿಮಾರ್ ಉಪಸ್ಥಿತರಿದ್ದರು.
