


ವಿಟ್ಲ : ವಿಟ್ಲ ಪೋಲಿಸ್ ಠಾಣೆಯಲ್ಲಿ ಎಸ್‌ಕೆಎಸ್‌ಎಫ್ ವಿಟ್ಲ ವಲಯ ಸಮಿತಿ ವತಿಯಿಂದ. ಖಾಸಗಿ ಚಾನೆಲ್ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಬೇಕು ಎಂದು ಠಾಣಾಧಿಕಾರಿ ಯಲ್ಲಪ ಎಸ್, ಇವರ ಮೂಲಕ ದೂರು ಸಲ್ಲಿಸಲಾಯಿತು.
ಈ ನಿಯೋಗದಲ್ಲಿ ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಅಧ್ಯಕ್ಷರಾದ ಖಾಸಿಂ ದಾರಿಮಿ, ವಿ.ಎಸ್ ಇಬ್ರಾಹಿಂ, ಪಟ್ಟಣ ಪಂಚಾಯಿತಿ ಸದಸ್ಯರಾದ ಸಮಿರ್ ಪಳಿಕೆ, ಹಕಿಂ ಪರ್ತಿಪಾಡಿ, ವಿಟ್ಲ ವಲಯ ಎಸ್‌ಕೆಎಸ್‌ಎಸ್‌ಎಫ್ ಅಧ್ಯಕ್ಷರಾದ ಆಶ್ರಫ್ ಕಬಕ, ಕಾರ್‍ಯದರ್ಶಿ ಸಿ.ಎಚ್ ಇಬ್ರಾಹಿಂ ಮುಸ್ಲಿಯಾರ್ ಇಬ್ರಾಹಿಂ ಫೈಝಿ, ವರ್ಕಿಂಗ್ ಕಾರ್‍ಯದರ್ಶಿ ಇಬ್ರಾಹಿಂ ಝೈನಿ, ಸಾಲೆತ್ತೂರು ಕ್ಲಸ್ಟರ್ ಕಾರ್‍ಯದರ್ಶಿ ಬಿ.ಎಂ ಅಲಿ ಮುಸ್ಲಿಯಾರ್, ವಿಟ್ಲ ಕ್ಲಸ್ಟರ್ ವರ್ಕಿಂಗ್ ಕಾರ್‍ಯದರ್ಶಿ ಇಸ್ಮಾಯಿಲ್ ಹನಿಫಿ ಮಿದ್ಲಾಜ್ ಪರ್ತಿಪಾಡಿ ಮೊದಲಾದವರು ಉಪಸ್ಥಿತರಿದ್ದರು.




