ಬಂಟ್ವಾಳ; ಬಿಜೆಪಿ ಶಿಸ್ತಿನ ಸಿಪಾಯಿ, ಮಾಜಿ ಕೇಂದ್ರ ರಕ್ಷಣಾ ಸಚಿವ , ಗೋವಾ ಸಿ.ಎಂ.ಮನೋಹರ್ ಪರಿಕ್ಕರ್ (63) ಅವರು ಇಂದು ಕೊನೆಯುಸಿರೆಳೆದರು.
ಕಳೆದ ಒಂದು ವರ್ಷದಿಂದ ಪ್ಯಾಂಕ್ರಿಯಾಕಿಟ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಕೇಂದ್ರ ಸರಕಾರದ ಜೊತೆ ಹಾಗೂ ನರೇಂದ್ರ ಮೋದಿಯವರ ಅವರ ಬಲಗೈಯಂತಿದ್ದ ಮನೋಹರ್ ಪರಿಕ್ಕರ್ ಇಂದು ಕೊನೆಯುಸಿರೆಳೆದರು.
ಅಮೇರಿಕಾದಲ್ಲಿ ಚಿಕಿತ್ಸೆ ಪಡೆದು ವಾಪಾಸು ಅಗಿದ್ದ ಪರಿಕ್ಕರ್
ಕೊನೆಯಿಸಿರುವರೆಗೂ ರಾಜಕೀಯದಲ್ಲಿ ಸೇವೆ ಸಲ್ಲಿಸಿದವರು.


ಬಿಜೆಪಿ ಪಕ್ಷದಲ್ಲಿ ಹಲವಾರು ಮಹತ್ತರ ಜವಬ್ದಾರಿ ಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಇವರು ನಿಷ್ಕಲ್ಮಶ ಮನಸ್ಸಿನ , ವಿರೋಧಿ ಗಳಿಲ್ಲದ ಸಜ್ಜನ ರಾಜಕಾರಣಿ.
ಇವರ ನಿಧನ ಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರ ಪತಿ ರಾಮನಾಥ್ ಕೋವಿಂದ್ ಸಹಿತ ಹಲವು ರಾಜಕೀಯ ಗಣ್ಯರು ಹಾಗೂ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.