Tuesday, February 3, 2026

ಖಾಸಗಿ ಫೈನಾನ್ಸ್‌ಗಳಿಂದ ಬಲತ್ಕಾರದ ವಸೂಲಿ ಮತ್ತು ಕಿರುಕುಳ ನಿಲ್ಲಿಸಿ- ರಾಮಣ್ಣ ವಿಟ್ಲ

ಬಂಟ್ವಾಳ: ಋಣ ಮುಕ್ತಕ್ಕಾಗಿ ಹೋರಾಟ ಸಮಿತಿ ಕರ್ನಾಟಕ ಸಿ.ಐ.ಟಿ.ಯು ಬಂಟ್ವಾಳ ತಾಲ್ಲೂಕು ಸಮಿತಿ, ಮತ್ತು ಜನವಾದಿ ಮಹಿಳಾ ಸಂಘಟನೆ (ಜೆ.ಎಂ.ಎಸ್.) ಜಂಟಿಯಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆ ಮಹಿಳೆಯರಿಗೆ ಕಿರುಕುಳ ನೀಡುವ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಇತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ಇಂದು ಬಿ.ಸಿ.ರೋಡ್ ನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.

ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ಸಿಐಟಿಯು ನ ರಾಮಣ್ಣ ವಿಟ್ಲ ಬಂಟ್ವಾಳ ತಾಲೂಕಿನ ಹಾಗೂ ಜಿಲ್ಲೆಯ ಇತರ ಕೆಲವು ತಾಲೂಕುಗಳ ಗ್ರಾಮ ಗ್ರಾಮಗಳಲ್ಲಿ ಖಾಸಗಿ ಫೈನಾನ್ಸ್‌ಗಳಾದ ಎಲ್ ಟಿ, ಮುತ್ತೂಟ್ , ಎಸ್.ಕೆ.ಎಸ್, ಸಮಸ್ತ, ಗ್ರಾಮೀಣ ಕೂಟ , ಸ್ಪಂದನ ಸ್ಪೂರ್ತಿ, ಆಶೀರ್ವಾದ , ಭಾರತ್ ಆಕ್ಸಿಸ್ ಮೊದಲಾದ ಹಲವು ಖಾಸಗಿ ಫೈನಾನ್ಸ್‌ಗಳಿಂದ ಹಳ್ಳಿಯ ಮನೆ ಮನೆಗಳಿಗೆ ತೆರಳಿ ಬಡ ಮಹಿಳೆಯರನ್ನೇ ಗುರಿಯಾಗಿ ಇಟ್ಟುಕೊಂಡು ದುಬಾರಿ ಬಡ್ಡಿಯಲ್ಲಿ ಸಾಲ ನೀಡುತ್ತಾ ಬಡ ಜನರನ್ನು ಸುಲಿಗೆ ಮಾಡುತ್ತಾರೆ. ಶ್ರೀಮಂತ ವ್ಯಕ್ತಿಗಳ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಬಡ ಮಹಿಳೆಯರಿಗೆ ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ನಂತರ ಪ್ರತಿವಾರ ಅವರಿಂದ ಬಲತ್ಕಾರದ ವಸೂಲಿ ನಡೆಸುತ್ತದೆ. ಸಾಲ ವಸೂಲಿಗಾರರು ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಾಲ ಪಡೆದು ಸಾಲದ ಮೂರು ಪಟ್ಟು ಹಣ ಕಟ್ಟಿದರೂ ಸಾಲ ಭಾದೆ ಮುಗಿಯುವುದಿಲ್ಲ.

ಈ ಹಣಕಾಸು ಸಂಸ್ಥೆಗಳು ಅವರ ಮಿತಿಯನ್ನು ಮಿರಿ ಕೆಲಸ ಮಾಡುತ್ತಾರೆ. ಅವರ ಪ್ರರ್ವತ್ತಿಗಳು ಕಾನೂನು ಬಾಹಿರವಾಗಿದ್ದರೂ ಅವರನ್ನು ಯಾರೂ ಕೇಳುವವರೇ ಇಲ್ಲವಾಗಿದೆ. ಇವರ ವಿರುದ್ಧ ಆಡಳಿತ ವ್ಯವಸ್ತೆ ಸಂಪೂರ್ಣ ನಿಷ್ಕ್ರೀಯವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತದಿಂದ, ಪ್ರಕೃತಿ ವಿಕೋಪದಿಂದ ಬೀಡಿ ಉದ್ಯಮದ ಕುಂಟಿತದಿಂದ ಬಡ ಗ್ರಾಮೀಣ ಮಹಿಳೆಯರಿಗೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಅವರ ಮೇಲೆ ಈ ಮೈಕ್ರೋ/ ಫೈನಾನ್ಸ್‌ಗಳ ಹಾಗೂ ಇತರ ಫೈನಾನ್ಸ್‌ಗಳ ಸಾಲ ವಸೂಲಿಗಾರರು ದೌರ್ಜನ್ಯ ನಡೆಸುತ್ತಾರೆ .ಇವರ ವರ್ತನೆ ಮಿತಿ ಮೀರಿದೆ. ಅವರು ಬಡ ಮಹಿಳೆಯರಿಗೆ ಜೀವ ಬೆದರಿಕೆ ಉಂಟು ಮಾಡಿ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಮಹಿಳೆಯರು ಹೆದರಿ ಮನೆ ಬಿಡುವ ದುಸ್ತಿಗೆ ಈ ಫೈನಾನ್ಸ್ ಮಾಲಕರು ಕಾರಣರಾಗುತ್ತಾರೆ.

  ಸಮಿತಿಯ ರಾಜ್ಯ ಕಾರ್ಯದರ್ಶಿ ಶಿವಕುಮಾರ್ ನ್ಯಾಯವಾದಿ , ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ , ಶೋಭಾ ಕೊಲ, ಶೇಖರ ಲಾಯಿಲ ,  ಪ್ರತಿಭಟನೆಯ ನೇತೃತ್ವವನ್ನು ಮಹಮ್ಮದ್ ಅಲ್ತಾಫ್ ತುಂಬೆ, ಶ್ರೀನಿವಾಸ ಪೂಜಾರಿ , ರಮಣಿ ನಾಟೆಕಲ್ಲು, ಹೊನ್ನಮ್ಮ , ಪೂಜಾ, ಲೋಲಾಕ್ಷಿ ಬಂಟ್ವಾಳ, ರಹಮತ್ ರಝೀಯಾ ಕಂಬಳಬೆಟ್ಟು ಮೊದಲಾದವರು ವಹಿಸಿದ್ದರು. ಮಹಮ್ಮದ್ ಇಕ್ಬಾಲ್ ಹಳೇಮನೆ ಧನ್ಯವಾದ ಸಲ್ಲಿಸಿದರು.

ಬೇಡಿಕೆಗಳು:-

೧. ಮೈಕ್ರೋ ಫೈನಾನ್ಸ್‌ಗಳು ಹಾಗೂ ಖಾಸಗಿ ಫೈನಾನ್ಸ್‌ಗಳು ಕಾನೂನು ಬಾಹಿರವಾಗಿ ನೀಡಿದ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು.
೨. ಬಡ ಮಹಿಳೆಯರ ಮನೆ ಮನೆಗೆ ಬಂದು ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ಇದೀಗ ದೌರ್ಜನ್ಯವೆಸಗುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
೩. ಈ ಹಣಕಾಸು ಸಂಸ್ಥೆಗಳ ಬಲತ್ಕಾರದ ಸಾಲ ವಸೂಲಿ, ಬೈಗುಳ, ಬೆದರಿಕೆಗಳನ್ನು ತಡೆಯಬೇಕು, ಹಾಗೂ ಮನೆಗೆ ಬಂದು ಸಾಲ ವಸೂಲಿ ಪದ್ದತಿಯನ್ನು ನಿಲ್ಲಿಸಬೇಕು.
೪. ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಆಧಾರ್‌ಕಾರ್ಡಿನ ಆಧಾರದಲ್ಲಿ ಸಾಲ ನೀಡಬೇಕು.
೫. ಮೈಕ್ರೋ ಪೈನಾನ್ಸ್‌ಗಳ (ಹಣಕಾಸು ಸಂಸ್ಥೆಗಳು) ಸಾಲ ವಸೂಲಾತಿ ಗೂಂಡಾಗಳಿಂದ ರಕ್ಷಣೆ ನೀಡಬೇಕು.

More from the blog

B.C.Road : ಮಹಿಳಾ ಮತ್ತು ಮಕ್ಕಳ ಸಂಭ್ರಮೋತ್ಸವ..

ಬಂಟ್ವಾಳ : ಜೀವನದ ಪ್ರತೀ ಕ್ಷಣದಲ್ಲಿ ಮಹಿಳೆಯರು ಸಂತೋಷ-ಸಂತಸ‌ ಪಡೆಯುವ ಸನ್ನಿವೇಶಗಳು ಸಮಾಜದಲ್ಲಿ ನಿರ್ಮಾಣಗೊಳ್ಳಲಿ ಎಂದು ಹಿರಿಯ ವಕೀಲ ಅಶ್ವನಿ‌ ಕುಮಾರ್ ರೈ ಹೇಳಿದರು. ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ‌ ಸಂಸ್ಥೆ ಮತ್ತು...

ಮಡಂತ್ಯಾರು : ನಕಲಿ ಚಿನ್ನದ ಸರ ಅಡವಿಟ್ಟು ವಂಚನೆ – ಇಬ್ಬರ ಬಂಧನ

ಬಂಟ್ವಾಳ: ಲಕ್ಷಾಂತರ ರೂ ಸಾಲ ಪಡೆಯುವ ಉದ್ದೇಶದಿಂದ ನಕಲಿ ಚಿನ್ನದ ಸರವನ್ನು ಅಡವಿಡಲು ಸಹಕಾರಿ ಸಂಘವೊಂದಕ್ಕೆ ಬಂದ ಇಬ್ಬರು ಆರೋಪಿಗಳು ಪೋಲೀಸರ ಅತಿಥಿಯಾಗಿದ್ದಾರೆ. ಮಡಂತ್ಯಾರು ಎಂಬಲ್ಲಿರುವ ಒಡಿಯೂರು ಶ್ರೀ ವಿವಿದ್ದೋದೇಶ ಸೌಹಾರ್ದ ಸಹಕಾರಿ ಸಂಘಕ್ಕೆ...

ಮಾಣಿ : ಪೈಪ್ ಲೈನ್ ಕಾಮಗಾರಿಯಿಂದ ಹದಗೆಟ್ಟ ರಸ್ತೆ – ಪ್ರತಿಭಟನೆಗೆ ಮುಂದಾದ ನಾಗರಿಕರು 

ವಿಟ್ಲ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಪೈಪ್ ಲೈನ್ ಕಾಮಗಾರಿ ನಡೆಸುವ ವೇಳೆ ಮಾಣಿ ಗ್ರಾಮದ ಅರ್ಬಿ ಪ್ರದೇಶದಲ್ಲಿ ರಸ್ತೆಯನ್ನು ಅಗೆದು ಅದರ ಮಧ್ಯ ಭಾಗದಲ್ಲಿ ಪೈಪ್ ಅಳವಡಿಕೆ ಮಾಡಿ ವ್ಯವಸ್ಥಿತವಾಗಿ ಅದನ್ನು...

B.C. Road : FTM ತರಬೇತಿ ಮತ್ತು ಅಭಿಯಾನ ಕಾರ್ಯಕ್ರಮ..

ಬಂಟ್ವಾಳ: ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ , ಜಿಲ್ಲಾ ಪ್ರಯೋಗಾಲಯ ಮಂಗಳೂರು ಇವರ ವತಿಯಿಂದ, ಗ್ರಾ.ಪಂ.ಅಧ್ಯಕ್ಷರುಗಳು,ಸದಸ್ಯರುಗಳು, ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರಿಗೆ FTM ತರಬೇತಿ ಮತ್ತು...