ಬಂಟ್ವಾಳ: ಮಾಜಿ ಸಚಿವ ರಮಾನಾಥ ರೈ ಜೊತೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಗುರುವಾರ ಬಂಟ್ವಾಳ ಸುತ್ತಮುತ್ತ ಪ್ರಚಾರವನ್ನು ನಡೆಸಿದ ಅವರು ತಾಲೂಕಿನ ಸುತ್ತಮುತ್ತವಿರುವ ಹಲವು ದೇವಸ್ಥಾನ, ದೈವಸ್ಥಾನ ,ಚರ್ಚ್‌ಗಳಿಗೆ ಭೇಟಿ ನೀಡಿ ದೇವರ ಆಶೀರ್ವಾದವನ್ನು ಪಡೆದಿದ್ದಾರೆ. ಜೊತೆಗೆ ಇಲ್ಲಿಯ ಜನ ಮಿಥುನ್ ರೈಗೆ ಮಣೆ ಹಾಕುವ ಲಕ್ಷಗಳು ಎದ್ದು ಕಾಣುತ್ತಿದೆ.. ಇನ್ನು ಗುರುಬಲವೊಂದಿದ್ದರೆ ಎಂಥಹ ಯುದ್ದವನ್ನು ಗೆದ್ದು ಬರುವ ಶಕ್ತಿ ಮನುಷ್ಯನಿಗಿದೆ ಈ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಿಥುನ್ ರೈ ಗೆದ್ದು ಬರಲಿ ಎಂಬ ನಿಟ್ಟಿನಲ್ಲಿ ಹಲವು ಚರ್ಚ್‌ಗಳ ಫಾದರ್ ಆಶೀರ್ವಾದ ನೀಡಿದ್ದಾರೆ.

ಬಂಟ್ವಾಳದಲ್ಲಿಯೇ ಇರುವ ಪವಾಡ ಪುರುಷ ಸಂತ ಅಂತೋನಿ ಚರ್ಚ್‌ನ ಗುರುಗಳಾದ ಫೆಡ್ರಿಕ್ ಮೊಂತೆರೋ ಮತ್ತು ವಂದನೀಯ ಸ್ಟೇನಿ ಫೆರ್ನಾಂಡೀಸ್ ಮಿಥುನ್ ರೈ ಹೆಸರಲ್ಲಿ ವಿಶೇಷ ಪೂಜೆ ಸಲ್ಲಿಸಿದ್ರು. ಈ ಸಂದರ್ಭದಲ್ಲಿ ಚರ್ಚ್‌ನ ಪಾಲನಾ ಮಂಡಳಿಯ ಫೆರ್ನಾಡೀಸ್ ಮಾಡ್ತೀನಿಸಿಕ್ವೇರ, ವಿನ್ಸೆಂಟ್ ಪಿಂಟೋ ರಿಚರ್ಡ್ ಡಿಸೋಜಾ , ಕಿರಣ್ ನೊರೊನ್ನಾ, ಡೆಂಜಿಲ್ ನೊರೊನ್ನಾ ಮಿಥುನ್ ಸಿಕ್ವೇರಾ ಉಪಸ್ಥಿತರಿದ್ದರು.. ಇದೇ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈ ಕೂಡ ಆರ್ಶಿರ್ವಾದವನ್ನು ಪಡೆದರು .