Wednesday, June 25, 2025

ದಿನಾಚರಣೆಗಳು ಕೇವಲ ನೆಪಮಾತ್ತಕ್ಕೆ ಸೀಮಿತ ಆಗಿರಬಾರದು: ಶನ್ಪತ್ ಶೆರೀಫ್

ದಿನಾಚರಣೆ ಗಳು ಕೇವಲ ನೆಪಮಾತ್ತಕ್ಕೆ ಸೀಮಿತ ಆಗಿರಬಾರದು ಎಲ್ಲಾ ದಿನಾಚರಣೆಗಳು ತನ್ನದೇ ಆದ ಮಹತ್ವವನ್ನು ಹೊಂದಿರುತ್ತವೆ. ಪ್ರತಿ ದಿನಾಚರಣೆ ಯ ಮಹತ್ವ ವನ್ನು ತಿಳಿದು ಆಚರಿಸಿದಾಗ ಮಾತ್ರ ಅದು ಸಾಥ೯ಕತೆಯನ್ನು ಪಡೆಯಲು ಸಾಧ್ಯ. ಇದಕ್ಕೆ ಮಕ್ಕಳ ದಿನಾಚರಣೆ ಯೂ ಹೊರತಾಗಗಿಲ್ಲ ಮಕ್ಕಳು ನಮ್ಮ ದೇಶದ ಆಸ್ತಿ ಅವರ ಭವಿಷ್ಯದ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ ಹಾಗಾಗಿ ಅವರಿಗೆ ಉತ್ತಮ ಸಂಸ್ಕಾರ ಯುತ ಶಿಕ್ಷಣ ನೀಡಿದಾಗ ದೇಶದ ಉಜ್ವಲ ತೆ ಕಾಣಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ, ವೀರಕಂಭ ಇಲ್ಲಿ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ‌ಸಹಯೋಗದಲ್ಲಿ ನಡೆದ ಮಕ್ಕಳ ದಿನಾಚರಣೆ ಯ ಅಂಗವಾಗಿ ವಿವಿಧ ಸ್ಪರ್ಧೆ ಗಳ ಉಧ್ಬಾಟನೆ ಮಾಡಿ ಸಂಸ್ಥೆ ಯ ಅಧ್ಯಕ್ಷ ರಾದ  ಶನ್ಪತ್ ಶೆರೀಫ್ ರ ವರು ಮಾತನಾಡಿದರು.

ನೆಹರೂ ರವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಮಾಡಲು ಕಾರಣ ಅದರ ಹಿನ್ನೆಲೆ ಯನ್ನು ತಿಳಿಸಿ ಆದಶ೯ವ್ಯಕ್ತಿ ಗಳು ನಮ್ಮ ಜೀವನದಲ್ಲಿ ಯಾವ ರೀತಿಯಲ್ಲಿ ಪ್ರಭಾವ ಬೀರುತ್ತಾರೆ ಅವರ ಒಳ್ಳೆಯ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೆಳೆಯಬೇಕು ಎಂದು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಕಾಯ೯ದಶಿ೯  ಚಿತ್ತರಂಛನ್ ಶೆಟ್ಟಿ ಬೊಂಡಾಲ ಇವರು ಮಾತನಾಡಿದರು.

ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಜೀವನದ ಅತಿ ದೊಡ್ಡ ಹೆಜ್ಜೆ ಈ ಹಂತದಲ್ಲಿ ಪಡೆದ ಉತ್ತಮ ಕಲಿಕೆ ಯು ಜೀವನದ ಎಲ್ಲಾ ಸಂದರ್ಭದಲ್ಲಿ ಯೂ ದಾರಿಯನ್ನು ತೋರುತ್ತದೆ ಕಲಿಕೆಯು ಕೇವಲ ಪಠ್ಯ ವಿಷಯದಲ್ಲಿ ಸೀಮಿತ ಆಗಿರದೇ ಪಠ್ಯೇತರ ವಿಷಯದಲ್ಲೂ ಹೊಂದಿರುವಂತೆ ಇರಬೇಕು ಆಗ ಸವಾ೯ಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ಶಾಲಾ ಶತಮಾನೋತ್ಸವ ಸಮಿತಿಯ ಉಪಾಧ್ಯಕ್ಷ ರಾದ  ಈಶ್ವರ ಭಟ್ ನಗ್ರಿಮೂಲೆ ಇವರು ತಿಳಿಸಿದರು.

ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲಾ ಮಕ್ಕಳಿಗೆ 1ರಿಂದ 4 ಮತ್ತು 5 ರಿಂದ 8 ಎಂಬುದಾಗಿ ಎರಡು ಹಂತಗಳಲ್ಲಿ ಕ್ಲೇ ಮೋಡೆಲ್ , ಡ್ರಾಯಿಂಗ್ , ಪಿಕ್ ಆಂಡ್ ಆಕ್ಟ್ , ಕ್ವಿಝ್ , ವಿವಿವಿಧ ರೀತಿಯ ಲಕ್ಕಿ ಗೇಮ್ಸ್ ಗಳನ್ನು ನಡೆಸಲಾಯಿತು.
ಜೊತೆಗೆ ಶಾಲಾ ಶಿಕ್ಷಕರಿಗೆ ಮತ್ತು ಪೋಷಕರಿಗೆ ಅದೃಷ್ಟ ದ ಆಟ ನಡೆಸಲಾಯಿತು.

ವೀರಕಂಭ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ದಿನೇಶ್ ರವರ ಅಧ್ಯಕ್ಷ ತೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಮಕ್ಕಳಿಗೆ ನಡೆಸಿದ ಪೇಪರ್ ಬ್ಯಾಗ್ ತಯಾರಿ ಯ ಪ್ರದಶ೯ನವನ್ನು ವೀಕ್ಷಿಸಿ ದ ಗ್ರಾಮ ಪಂಚಾಯತ್ ಅಧ್ಯಕ್ಷ ರು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ಹಾಗೂ ಎಲ್ಲಾ ಮಕ್ಕಳಿಗೆ ಪ್ರೋತ್ಸಾಹಕರ ಬಹುಮಾನ ವಿತರಿಸಲಾಯಿತು.
ಕಾಯ೯ಕ್ರಮದಲ್ಲಿ ಆನ್ಸ್ ನ ಅಧ್ಯೆಕ್ಷೆ ವಿದ್ಯಾ ಉಮೇಶ್ ಕಾಯ೯ದಶಿ೯ ರಶ್ಮಿ ವಿ ಶೆಟ್ಟಿ , ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ  ವಿಜಯಾ ಶೇಖರ್ ,ಸದಸ್ಯ ಗೋಪಾಲಕೃಷ್ಣ ಭಟ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಸದಸ್ಯರಾದ ಜಯರಾಜ್ ಎಸ್ ಬಂಗೇರ ,ಸುಕುಮಾರ್ ಬಂಟ್ವಾಳ, ಕಿಶೋರ್ ಕುಮಾರ್,  ಗಾಯತ್ರಿ ಲೋಕೇಶ್, ನಾರಾಯಣ ಸಿ ಪೆರ್ನೆ ನೌಶೀದ್ ಆಲ್ ಖಜಾನಾ ರವರು ಭಾಗವಹಿಸಿದ್ದರು.
ವೀರಕಂಭ
ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಾಸ್ತಾವಿಕ ಮಾತಿನೊಂದಾಗೆ ಸ್ವಾಗತಿಸಿದರು. ಶಿಕ್ಷಕಿಯರಾದ ಮುಷೀ೯ದಾ ಬಾನು ಹಾಗೂ ಜಯಲಕ್ಷ್ಮಿ ಯವರು ವಂದಿಸಿದರು. ಶಿಕ್ಷಕಿ ಸಂಗೀತ ಶಮ೯ರವರು ಕಾಯ೯ಕ್ರಮ ನಿರೂಪಿಸಿದರು.

More from the blog

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...