ಬಂಟ್ವಾಳ: ಬಾಲ್ಯ ವಿವಾಹಕ್ಕೆ ತಯಾರಿಗೆ ತಾಲೂಕಿನ ಅಧಿಕಾರಿಗಳು ಬ್ರೇಕ್ ಹಾಕಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಂಟ್ವಾಳ ತಾಲೂಕಿನ ಪುರಸಭಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.
ಬಾಲಕಿಗೆ 17 ವರ್ಷ ವಯಸ್ಸು ಅಗಿದ್ದು , ಮದುವೆ ತಯಾರಿ ನಡೆಯುತ್ತಿದೆ ಎಂದು ಈ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದ ಹಿನ್ನೆಲೆಯಲ್ಲಿ ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಲಾಗಿದೆ.
ಮಾ.26 ರಂದು ಬಿಸಿರೋಡಿನಲ್ಲಿ ಮದುವೆ ನಡೆಯುತ್ತದೆ ಎಂಬ ಖಚಿತವಾದ ಮಾಹಿತಿ ಬಿಸಿರೋಡಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯ ಗಮನಕ್ಕೆ ಬಂದಿತ್ತು.
ಆ ಹಿನ್ನೆಲೆಯಲ್ಲಿ ಬಾಲ್ಯವಿವಾಹ ತಡೆ ಸಮಿತಿ ಅಧ್ಯಕ್ಷರಾಗಿರುವ ತಹಶೀಲ್ದಾರ್ ಅವರ ಸೂಚನೆ ಮೇರೆಗೆ ಪೋಲೀಸ್ ಇಲಾಖೆಯ ಮೂಲಕ ರಕ್ಷಣೆ ಪಡೆದು ಬಾಲಕಿಯ ಮನೆಗೆ ಬೇಟಿ ನೀಡಿತ್ತು.
ಸಂಬಂಧಿಸಿದ ಅಧಿಕಾರಿಗಳ ಜೊತೆ ಸಿ.ಡಿ.ಪಿ.ಒ. ಇಲಾಖೆ ಮನೆಗೆ ಬೇಟಿ ನೀಡಿ ಮನೆಯವರಲ್ಲಿ ಯುವತಿಗೆ 18 ಭರ್ತಿಯಾಗದೆ ಮದುವೆ ನಡೆಸದಂತೆ ಮುಚ್ವಳಿಕೆಯೊಂದನ್ನು ಬರೆಯಿಸಿಕೊಂಡಿದ್ದಾರೆ.


