ಬಂಟ್ವಾಳ: ಪಾಣೆಮಂಗಳೂರು ಸೇತುವೆ ಬಳಿ ಇತ್ತೀಚೆಗೆ ಮೋಟಾರು ಬೈಕ್ ಅಪಘಾತದಿಂದ ಕಾಲು ಕಳೆದುಕೊಂಡ ತುಂಬೆಯ ಗೋಪಾಲ್ ಕುಲಾಲ್ ಇವರಿಗೆ ಕುಲಾಲ ಸೇವಾ ಸಂಘ ಇದರ ವತಿಯಿಂದ ವೈದ್ಯಕೀಯ ಚಿಕಿತ್ಸೆಗಾಗಿ ರೂ. 10000 ಧನಸಹಾಯ ವನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷರಾದ ಐತಪ್ಪ ಕುಲಾಲ್ ಮುದಲ್ಮೆಯವರು ಗಾಯಾಳುವಿನ ಮನೆಗೆ ತೆರಳಿ ಧನಸಹಾಯದ ಚೆಕ್ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಲಿಂಗಪ್ಪ ಕುಲಾಲ,ಮಹಿಳಾ ಘಟಕದ ಅಧ್ಯಕ್ಷೆ ಉಮಾವತಿಲಿಂಗಪ್ಪ, ಪಧಾಧಿಕಾರಿಗಳಾದ ಭಾಸ್ಕರ್ ಕುಲಾಲ್, ಹರೀಶ್ ಪೆರ್ಲಬೈಲ್, ದಿನೇಶ್ ಪೆರ್ಲಬೈಲ್ , ಚಿದಾನಂದ ಕುಲಾಲ್ ಮಜಿ ಹಾಜರಿದ್ದರು.