ಬಂಟ್ವಾಳ: ಜಲಾಲಿಯ್ಯ ಜುಮಾ ಮಸ್ಜಿದ್ ಚಟ್ಟೆಕಲ್ ಸಜಿಪ ಇವರ ಆಶ್ರಯದಲ್ಲಿ ಯನಪೋಯ ಆಸ್ಪತ್ರೆ, ದಂತ ಕಾಲೇಜು ಮತ್ತು ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಕ್ಯಾನ್ಸರ್ ಬಗ್ಗೆ ಮಾಹಿತಿ ಶಿಬಿರ ಹಾಗೂ 7 ನೇ ಬ್ರಹತ್ ಜಲಾಲಿಯ್ಯ ವಾರ್ಷಿಕ ಕಾರ್ಯಕ್ರಮ ಫೆ.22 ರಿಂದ ಫೆ.28 ವರೆಗೆ ಚಟ್ಟೆಕಲ್ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.



ಫೆ.22ರಂದು ಸ್ವಲಾತ್ ವಾರ್ಷಿಕ ನಡೆಯಲಿದ್ದು, ಅಸ್ಸೈಯದ್ ಕೂರತ್ ತಂಙಳ್ ನೇತೃತ್ವ ನೀಡಲಿದ್ದಾರೆ. ಫೆ.23ರಂದು ಕುತುಬಿಯ್ಯತ್ ಜಿಸ್ತಿಯಾ ಕಾರ್ಯಕ್ರಮ ಜರುಗಲಿದ್ದು, ಸೈಯದ್ ಯು.ಪಿ.ಎಸ್.ಕಾಸಿಂ ತಂಙಳ್ ಹಾಗೂ ಮುಹಮ್ಮದ್ ಆಲಿ ಮದನಿ ಕೀಯಿಕ್ಕೋಡ್ ಪಾಲ್ಗೊಂಳ್ಳಲಿದ್ದಾರೆ. ಫೆ.24ರಂದು ಬೆಳಿಗ್ಗೆ ಮೆಡಿಕಲ್ ಕ್ಯಾಂಪ್ ಹಾಗೂ ಫೆ.25ರಂದು ಸೈಯದ್ ಆದೂರು ತಂಙಳ್ ದುಆ ನೇತೃತ್ವದೊಂದಿಗೆ ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ಪ್ರವಚನ ನೀಡಲಿದ್ದಾರೆ.
ಫೆ.26ರಂದು ಸೈಯದ್ ತ್ವಾಹ ತಂಙಳ್ ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ಜರುಗಲಿದೆ. ಫೆ.27ರಂದು ಉಮರ್ ಮುಸ್ಲಿಯಾರ್ ಮರ್ಧಾಳ ಪ್ರವಚನ ನೀಡಲಿದ್ದು, ಸೈಯದ್ ಶಹೀರ್ ತಂಙಳ್ ಮಳ್ಹರ್ ದುಆಗೆ ನೇತೃತ್ವ ನೀಡಲಿದ್ದಾರೆ. ಸಮಾರೋಪ ದಿನವಾದ ಫೆ. 28ರಂದು ಸೈಯದ್ ಚಟ್ಟೆಕ್ಕಲ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ಮಜ್ಲಿಸ್ ನಡೆಯಲಿದೆ. ಬಳಿಕ ಪೇರೋಡ್ ಮಹಮ್ಮದ್ ಅಝ್ಹರಿ ಪ್ರವಚನ ನೀಡಲಿದ್ದು, ಸೈಯದ್ ಸುಹೈಲ್ ತಂಙಳ್ ಕಣ್ಣೂರು ದುಆಗೆ ನೇತೃತ್ವ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.