ಬಂಟ್ವಾಳ: ಜಿಲ್ಲೆಯ ಲ್ಲಿ ನಿರಂತರವಾಗಿ ಸುರಿಯುವ ಮಳೆಗೆ ಅಲ್ಲಲ್ಲಿ ಗುಡ್ಡ ಜರಿತಗಳು ಹೆಚ್ಚಾಗುತ್ತಿದ್ದು ಗುರುವಾರ ಶಿರಾಡಿ ಘಾಟ್ ರಸ್ತೆ ಕುಸಿದ ಬೆನ್ನಲ್ಲೇ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಯೂ ಕುಸಿತ ಕಂಡಿದೆ.
ಚಾರ್ಮಾಡಿ ರಸ್ತೆಯ 6 ನೇ ತಿರುವಿನ ರಸ್ತೆ ಯ ಬದಿಯಲ್ಲಿ ಮಣ್ಣು ಜರಿದು ಬಿದ್ದ ಬಗ್ಗೆ ಬೆಳ್ತಂಗಡಿ ಪೋಲೀಸರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಬೆಳ್ತಂಗಡಿ ಕಡೆಯಿಂದ ಹೋಗುವ ಘನ ವಾಹನಗಳಿಗೆ ಅವಕಾಶ ಇಲ್ಲ ಎಂದು ಬೆಳ್ತಂಗಡಿ ಪೋಲೀಸರು ಬ್ಯಾರಿಕೇಡ್ ಗಳನ್ನು ಅಳವಡಿಸಿದ್ದಾರೆ.



ಈಗಾಗಲೇ ಬೆಳ್ತಂಗಡಿ ತಹಶಿಲ್ದಾರ್ ಮಹೇಶ್ ಜಿ.ಹಾಗೂ ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್, ಹಾಗೂ ಎಸ್.ಐ.ಕೃಷ್ಣಕಾಂತ್ ಅವರು ಜೊತೆಗೆ ಅರಣ್ಯ ಇಲಾಖೆಯ ಹಾಗೂ ಸಂಬಂಧಿಸಿದ ವಿವಿಧ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ.
ಜಿಲ್ಲಾಧಿಕಾರಿ ಅದೇಶದಂತೆ ಮುಂದೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ.
ಪ್ರಸ್ತುತ ಸಣ್ಣ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದ್ದು ಜಿಲ್ಲಾಧಿಕಾರಿ ಗಳ ಅನುಮತಿ ಪಡೆದು ಮುಂದಿನ ಕ್ರಮಗಳ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.












