ಬಂಟ್ವಾಳ: ಸುಮಾರು ಮೂವತ್ತು ವರ್ಷಗಳಿಂದ ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದೆ ಸಾಕಷ್ಟು ವಿವಾದಗಳಿಗೆ ದಾರಿ ಮಾಡಿಕೊಟ್ಟಿದ್ದ ಬಿಸಿರೋಡಿನ ಸ್ಟೇಟ್ ಬ್ಯಾಂಕ್ ಎದುರಿನ ಕಾರು ಪಾರ್ಕಿಂಗ್ ನ ಜಾಗಕ್ಕೆ ಚರಂಡಿ ಕಾಮಗಾರಿ ನಡೆಯುತ್ತಿದೆ.

ಕಳೆದ ಮೂವತ್ತು ವರ್ಷಗಳಿಂದ ಪಿ.ಎಲ್.ಡಿ.ಬ್ಯಾಂಕ್ ಮುಂಭಾಗದಲ್ಲಿ ಚರಂಡಿ ಇಲ್ಲದೆ ಮಳೆ ನೀರು ಸರಿಯಾಗಿ ಹರಿದು ಹೋಗದೆ ಬಿಸಿರೋಡಿನ ಕೈಕುಂಜೆ ಸಂಪರ್ಕದ ರಸ್ತೆಯಲ್ಲಿ ನಿಂತು ಸಾರ್ವಜನಿಕ ರಿಗೆ ಬಹಳಷ್ಟು ತೊಂದರೆ ಯಾಗುತ್ತಿತ್ತು.
ಮಳೆಗಾಲದಲ್ಲಿ ಇಲ್ಲಿ ಕೃತಕ ಕೆರೆ ಸೃಷ್ಟಿ ಯಾಗಿ ವಾಹನ ಹಾಗೂ ಜನರು ನಡೆದಾಡಲು ಕಷ್ಟದ ಪರಿಸ್ಥಿತಿ ನಿರ್ಮಾಣ ವಾಗುತ್ತಿತ್ತು.
ಇಲ್ಲೇ ಒಂದು ರಾಷ್ಟ್ರೀಕೃತ ಬ್ಯಾಂಕ್ , ಒಂದು ಡಿ.ಸಿ.ಸಿ.ಬ್ಯಾಂಕ್, ಹಾಗೂ ಎರಡು ಸಹಕಾರಿ ಬ್ಯಾಂಕ್ , ಒಂದು ಎ.ಟಿ.ಮ್, ಇಲ್ಲಿಗೆ ಬರುವ ಜನರು ನೀರು ಸಂಪೂರ್ಣ ಹರಿದುವಹೋಗುವಷ್ಟು ಕಾಲ ನಿಂತು ನೋಡಬೇಕಾಗಿತ್ತು.
ಜೊತೆಗೆ ಇಲ್ಲಿ ಕಾರು ಪಾರ್ಕಿಂಗ್ ಬೇರೆ ಇತ್ತು.ಅವರಂತೂ ಪಟ್ಟ ಕಷ್ಟ ಹೇಳ ತೀರ ದಷ್ಟು
ಈ ಸಮಸ್ಯೆ ಯ ಬಗ್ಗೆ ಅನೇಕ ಬಾರಿ ಕಾರು ಹಾಗೂ ವ್ಯಾನ್ ಚಾಲಕರ ಮಾಲಕರ ಸಂಘ ಹಾಗೂ ಅನೇಕ ಸಂಘಟನೆಗಳು ಪುರಸಭೆ ಗೆ ಮನವಿ ಮಾಡಿದ್ದರು, ಸಾಲದೆಂಬಂತೆ ಪ್ರತಿಭಟನೆಗಳನ್ನು ನಡೆಸಿದ್ದರು, ಅದರೆ ಪುರಸಭೆ ಮಾತ್ರ ಇದ್ಯಾವುದಕ್ಕೂ ಕ್ಯಾ ರೇ ಮಾಡಲಿಲ್ಲ, ಸಮಸ್ಯೆ ಯನ್ನು ಗಂಭೀರ ವಾಗಿ ಪರಿಗಣಿಸದೆ ಕೇವಲ ಭರವಸೆ ಮಾತ್ರ ನೀಡಿ ಪ್ರತಿಭಟನಕಾರರನ್ನು ಸಮಾದಾನ ಪಡಿಸುತ್ತಾ ಬಂದಿದ್ದರು.
ಈ ಬಾರಿ ಮತ್ತೆ ಮಳೆ ಗಾಲ ಆರಂಭದ ದಿನಗಳಲ್ಲಿ ಮತ್ತೆ ಸಾಂಕೇತಿಕ ಪ್ರತಿಭಟನೆ ನಡೆಸಿದ ಕಾರು ಮತ್ತು ವ್ಯಾನ್ ಬಾಲಕ ರ ಸಂಘ ಪುರಸಭೆಯ ಮುಂದೆ ಅರ್ನಿದಿಷ್ಟಾವಧಿ ಮುಸ್ಕರದ ಬಿಸಿ ಮುಟ್ಟಿಸಿತ್ತು.
ಈ ನಡುವೆ ಶಾಸಕರನ್ನು ಬೇಟಿ ಮಾಡಿದ ಸಂಘಟನೆ ಸಮಸ್ಯೆ ಯ ಬಗ್ಗೆ ಮಾಹಿತಿ ನೀಡಿತ್ತು.
ಹಾಗಾಗಿ ಶಾಸಕ ರಾಜೇಶ್ ನಾಯಕ್ ಅವರು ಸ್ಥಳಕ್ಕೆ ಎ.ಸಿ.ರವಿಚಂದ್ರ ನಾಯ್ಕ ಹಾಗೂ ಪುರಸಭಾ ಇಂಜಿನಿಯರ್ ಡಿ.ಮೆಲ್ಲೋ ಅವರನ್ನು ಕರೆಸಿ ಕೂಡಲೇ ಕಾಮಗಾರಿ ನಡೆಸುವಂತೆ ಸೂಚನೆ ನೀಡಿದ್ದರು.
ಪರಿಣಾಮವಾಗಿ ಕೆಲಸ ನಡೆಯುತ್ತಿದೆ .
ಕಾರು ಮತ್ತು ವ್ಯಾನ್ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಿಠಲ ರೈ ಮದ್ವಗುತ್ತು .
ದ.ಕ.ಜಿಲ್ಲಾ ಟೂರಿಸ್ಟ್ ಕಾರು ಮತ್ತು ವ್ಯಾನ್ ಚಾಲಕ ಮಾಲಕರ ಸಂಘದ ಅಧ್ಯಕ್ಷ.
ನಮ್ಮ ನಿರಂತರ ಹೋರಾಟ ದ ಫಲವಾಗಿ
ಕಳೆದ ಮೂವತ್ತು ವರ್ಷಗಳಲ್ಲಿ ಆಗದ ಚರಂಡಿ ಕೆಲಸ ವನ್ನು ಶಾಸಕರು ವಿಶೇಷ ಪ್ರಯತ್ನದ ಮೂಲಕ ಮಾಡಿಸುತ್ತಿದ್ದಾರೆ ಅವರಿಗೆ ವಿಶೇಷ ವಾದ ಧನ್ಯವಾದಗಳು.
ಮನವಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನ ವಾಗಿಲ್ಲ.
ನಾವು ಶಾಸಕ ರಾಜೇಶ್ ನಾಯಕ್ ಅವರಿಗೆ ಮನವಿ ನೀಡಿದ್ದು ಅವರು ಸ್ಪಂದಿಸಿ ದ್ದಾರೆ.
ಚರಂಡಿ ನಿರ್ಮಾಣದಿಂದ ಸಾರ್ವಜನಿಕ ರಿಗೆ ಬ್ಯಾಂಕ್ ಗೆ ಬರುವ ಜನರಿಗೆ ಹಾಗೂ ಕಾರು ಚಾಲಕರಿಗೆ ಸಾಕಷ್ಟು ಸಹಾಯವಾಗಿದೆ .
ಮಳೆಗಾಲದಲ್ಲಿ ಅಗುತ್ತಿದ್ದ ಕಷ್ಟಕ್ಕೆ ಇನ್ನಾದರೂ ಮುಕ್ತಿ ಸಿಗಬಹುದು ಎಂದು ಅವರು ಹೇಳಿದ್ದಾರೆ.