ಚಂದಳಿಕೆ ಸರಕಾರಿ ಹಿ.ಪ್ರಾ ಶಾಲೆಯು 1958ರಲ್ಲಿ ಪ್ರಾರಂಭಗೊಂಡು 60 ರ ಸಂಭ್ರಮದಲ್ಲಿದ್ದು, ಜ. 2ರಂದು ವಜ್ರಮಹೋತ್ಸವ ಸಮಾರಂಭ ನಡೆಯಲಿದೆ. 60ರ ಸಂಭ್ರಮದ ಕಾರ್‍ಯಕ್ರಮವನ್ನು ಉದ್ಘಾಟನೆಯನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಮಾಡಲಿದ್ದಾರೆ. ರೂ.ಒಂದು ಲಕ್ಷ ಮೌಲ್ಯದಲ್ಲಿ ಸಭಾಂಗಣಕ್ಕೆ ಟೈಲ್ಸ್ ಅಳವಡಿಸಲಾಗಿದೆ ಜೆಎಸ್‌ಡಬ್ಲು ಸಿಮೆಂಟ್ ಲಿಮಿಟೆಡ್‌ನವರು ಕೊಡುಗೆಯಾಗಿ ನೀಡಿದ ನೂತನ ತರಗತಿ ಕೊಠಡಿ ಉದ್ಘಾಟನೆಯಾಗಲಿದೆ. ನ್ಯೂ ಇಂಡಿಯಾ ಇನ್ಸೂರೆನ್ಸ್‌ನವರು ರೂ.ಒಂದು ಲಕ್ಷ ಕೊಡುಗೆಯಿಂದ ನವೀಕರಿಸಿದ ನಲಿಕಲಿ ಕೊಠಡಿ ಉದ್ಘಾಟನೆಯಾಗಲಿದೆ. ಶಾಸಕರ ನಿಧಿಯಿಂದ ಇಂಟರ್‌ಲಾಕ್ ಅಳವಡಿಸಲಾಗಿದೆ ಅದಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ, ಎಲ್ಲಾ ತರಗತಿಗೆ ಟೈಲ್ಸ್ ಅಳವಡಿಕೆ, ಮುಖ್ಯದ್ವಾರಕ್ಕೆ ಹೊಸಗೇಟ್ ಹಾಗೂ ಶಾಲೆಯ ಕಟ್ಟಡಗಳಿಗೆ ಸುಣ್ಣ ಬಣ್ಣಗಳ ಕಾಮಗಾರಿ ನಡೆದಿದೆ. ಈ ಕಾರ್‍ಯಕ್ರಮದ ಸಂಭ್ರಮದಲ್ಲಿ ತಾವೆಲ್ಲರು ಭಾಗವಹಿಸ ಬೇಕೆಂದು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಭವಾನಿ ರೈ ಕೊಲ್ಯ ಹಾಗೂ ಮುಖ್ಯ ಶಿಕ್ಷಕ ಬಿ.ವಿಶ್ವನಾಥ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

