Tuesday, July 8, 2025

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಔಷಧೀಯ ಸಸಿ ನಾಟಿ ಅಭಿಯಾನ ಕ್ಕೆ ಚಾಲನೆ

ಗುರುಬೆಳದಿಂಗಳು ಕುದ್ರೋಳಿ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 167ನೇ ಜನ್ಮದಿನಾಚರಣೆ ಅಂಗವಾಗಿ ಮಹಾಮಾತೆ ದೇಯಿ ಬೈದೆತಿಯ ಸಂಕಲ್ಪದಂತೆ ಗುರುಗಳ ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವದಂತೆ ಚರ್ಚ್, ದರ್ಗಾ, ಬಸದಿ, ದೈವಸ್ಥಾನ, ದೇವಸ್ಥಾನ, ಗುರುದ್ವಾರ, ಗರೋಡಿಗಳಲ್ಲಿ ಅಳಿವಿನಂಚಿನಲ್ಲಿರುವ ಔಷಧೀಯ ಸಸ್ಯಗಳನ್ನು ನೆಡುವ ಯೋಜನೆಗೆ ಶ್ರೀ ಗೆಜ್ಜೆಗಿರಿ ನಂದನಬಿತ್ತ್‌ಲ್ ಕ್ಷೇತ್ರದಲ್ಲಿ ಶುಕ್ರವಾರ ಅದ್ದೂರಿ ಚಾಲನೆ ದೊರಕಿತು.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ, ಗುರುಪೂಜೆ ನೆರವೇರಿತು. ಗುರು ಬೆಳದಿಂಗಳು ಸಂಸ್ಥೆ ಅಧ್ಯಕ್ಷ ಪದ್ಮರಾಜ್ ಆರ್., ಕುದ್ರೋಳಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉದ್ಯಮಿ ಶೈಲೇಂದ್ರ ಸುವರ್ಣ, ಅನುಷ್ಕಾ ಬಿಲ್ಡರ್ಸ್‌ನ ಕಿಶೋರ್ ದಂಡೆಕೇರಿ, ಗುರು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಎಂ.ಜಯಾನಂದ, ಯುವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಜಯರಾಮ ಕಾರಂದೂರು, ಅಶೋಕ್ ಕುಮಾರ್, ಡೆಕೊರೇಟರ್ ರೋಹಿದಾಸ್, ಪರಿಸರ ಪ್ರೇಮಿ ಮಾಧವ ಉಳ್ಳಾಲ್, ನಮ್ಮ ಕುಡ್ಲ ಚಾನೆಲ್ ನಿರ್ದೇಶಕ ಲೀಲಾಕ್ಷ ಕರ್ಕೇರ, ಉರ್ವ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಬಿ.ಪಿ ಹರೀಶ್, ಕುದ್ರೋಳಿ ದೇವಳದ ಮ್ಯಾನೇಜರ್ ವಿನೀತ್ ಕುಮಾರ್, ರಾಮಚಂದ್ರ, ಶೋಭಾ ಮೊದಲಾದವರಿದ್ದರು.

ಶ್ರೀಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ,ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ ಕಾರ್ಯದರ್ಶಿ, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಕೆ‌.ಬಿ ರಾಜರಾಮ್, ಪ್ರಮುಖರಾದ ಶ್ರೀಕರ್ ಪ್ರಭು, ರಘುನಾಥ್ ಮಾಬೆನ್ ಉಡುಪಿ, ಚಂದ್ರಕಾಂತ್ ಶಾಂತಿವನ, ಪ್ರವೀಣ್ ನೆಟ್ಟಾರ್, ರಾಮಚಂದ್ರ ಪೂಜಾರಿ ದೇರೆಬೈಲ್, ಹರೀಶ್ ಪೂಜಾರಿ ಮಂಗಳೂರು, ಪ್ರವೀಣ್ ಅಂಚನ್ ಅರ್ಕುಳ, ರಾಜೇಶ್‌ ಸುವರ್ಣ, ಜನಾರ್ದನ ಪೂಜಾರಿ ಪಡುಮಲೆ ಚಂದ್ರಶೇಖರ್ ಸಾಲಿಯಾನ್ ಕಲ್ಲಡ್ಕ ಸದಾನಂದ ಪೂಜಾರಿ ಬರಿಮಾರ್, ಸುರೇಶ್ ಪೂಜಾರಿ ಪಣಂಬೂರು, ಸದಾನಂದ ಕುಳಾಯಿ ಮೊದಲಾದವರಿದ್ದರು.

More from the blog

ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ – ವಾರ್ಷಿಕ ಮಹಾಸಭೆ

ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತವು 2024 -25 ನೇ ಸಾಲಿನಲ್ಲಿ 371 ಲಕ್ಷ ರೂ.ವ್ಯವಹಾರ ನಡೆಸಿ 20.37 ಲಕ್ಷ ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ನಾಗಶ್ರೀ ಮಿತ್ರ ವೃಂದ : ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶೈಲೇಶ್ ಈಶನಗರ ಆಯ್ಕೆ..

ಬಂಟ್ವಾಳ : ಚಾರಿಟೇಬಲ್ ಟ್ರಸ್ಟ್ (ರಿ ) ಕಮ್ಮಾಜೆ ತೆಂಕಬೆಳ್ಳೂರು ಇದರ 24ನೇ ವರ್ಷದ ಮೊಸರು ಕುಡಿಕೆ ಉತ್ಸವ ಸಮಿತಿಯ ಸಂಚಾಲಕರಾಗಿ ಶ್ರೀ ಶೈಲೇಶ್ ಈಶನಗರ ಆಯ್ಕೆಯಾಗಿದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಂಜಿತ್ ಕಮ್ಮಾಜೆ,...

ಅಕ್ರಮವಾಗಿ ಮಧ್ಯ ದಾಸ್ತಾನು ಇರಿಸಿ ಮಾರಾಟ : ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರಿಂದ ದಾಳಿ..

ಬಂಟ್ವಾಳ: ಅಕ್ರಮವಾಗಿ ಮಧ್ಯ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಅಂಗಡಿಯೊಂದಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೋಲೀಸರು ದಾಳಿ ನಡೆಸಿದ ಘಟನೆ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ. ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ,ಅಜ್ಜಿ ಬಾಕಿಮಾರು ಸೂರ್ಯಚಂದ್ರಜನರಲ್ ಸ್ಟೋರ್...