ಬಂಟ್ವಾಳ: ಜೂ.7 ರಂದು ಕಾರ್ಮೆಲ್ ಬಾಲಿಕಾ ಪ್ರೌಢ ಶಾಲೆ, ಮೊಡಂಕಾಪುವಿನಲ್ಲಿ ಪರಿಸರ ದಿನ ಮತ್ತು ರಮ್ಜಾನ್ ಕಾರ್ಯಕ್ರಮವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಭಗಿನಿ ನವೀನ ಎ.ಸಿ ವಹಿಸಿದ್ದರು.


ಹಸಿರು ಭವಿಷ್ಯ ಪರಿಸರ ಸಂಘ ಹಾಗೂ ಸುಗಂಧಿ ಗೈಡ್ಸ್ ದಳ ಜಂಟಿಯಾಗಿ ಗಿಡಗಳನ್ನು ನೆಡುವ ಕಾರ್ಯಕ್ರಮವನ್ನು ಆಯೋಜಿಸಿದರು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ರಮ್ಜಾನ್ ಹಬ್ಬದ ಕುರಿತು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಮಾರಿ ಸಮ್ರೀನಾ ಕಾರ್ಯಕ್ರಮವನ್ನು ನಿರ್ವಹಿಸಿದಳು. ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಗೆ ಸಿಹಿತಿಂಡಿ ವಿತರಿಸಲಾಯಿತು.