Sunday, July 6, 2025

ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ : ಆರು ಮಂದಿ ಗಂಭೀರ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ದ್ವಿಚಕ್ರವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಮಾಣಿ ಸಮೀಪದ ‌ಕೊಡಾಜೆ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿದೆ.

ಮಂಗಳೂರು  ‌ಕಡೆಯಿಂದ ಅತೀ ವೇಗವಾಗಿ ಬರುತ್ತಿದ್ದ ಕಾರು ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಚಾಲಕನಿಗೆ ಕಾರನ್ನು ನಿಯಂತ್ರಣ ಸಾಧಿಸಲು ಸಾಧ್ಯವಾಗದೆ ಎದುರುಗಡೆ ಬರುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಬಳಿಕ ಪಲ್ಟಿಯಾಗಿ ನಿಂತಿದೆ.

‌‌ಘಟನೆಯಿಂದ ಒಟ್ಟು ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರ ವಿವರ ಸಿಕ್ಕಿಲ್ಲ.ಆರು ಮಂದಿಯನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದ ರಭಸಕ್ಕೆ ಕಾರಿನಲ್ಲಿ ಮೂವರು ಮಹಿಳೆಯರು ಹೊರೆಕ್ಕೆಸಯಲ್ಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ಕಾರು ಹಾಗೂ ಸ್ಕೂಟರ್ ಸಂಪೂರ್ಣ ‌ಜಖಂಗೊಂಡಿದೆ.

ಸ್ಥಳಕ್ಕೆ ವಿಟ್ಲ ಪೋಲೀಸರು ಭೇಟಿ ನೀಡಿದ್ದಾರೆ

More from the blog

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...

Bhandaribettu : ರಸ್ತೆಗೆ ಉರುಳಿ ಬಿದ್ದ ಬಂಡೆಕಲ್ಲು – ಪುರಸಭೆ, ಕಂದಾಯ ಇಲಾಖೆಯಿಂದ ತೆರವು ಕಾರ್ಯ

ಬಂಟ್ವಾಳ : ಬಿಸಿರೋಡು - ವಿಲ್ಲಾಪುರಂ ರಾಜ್ಯ ಹೆದ್ದಾರಿಗೆ ಬಂಡೆಕಲ್ಲು ಉರುಳಿ ಬಿದ್ದ ಪರಿಣಾಮ, ಕಕ್ಕೆ ಪದವು ನಿವಾಸಿ ರವಿ ಎಂಬವರ ಸ್ಕೂಟರ್ ಹಾನಿಯಾಗಿ, ಅವರು ಗಾಯಗೊಂಡಿದ್ದಾರೆ. ಬಂಟ್ವಾಳ ಪುಂಜಾಲಕಟ್ಟೆ ರಾಷ್ಟೀಯ ಹೆದ್ದಾರಿ ಬಿ.ಸಿ.ರೋಡ್...