ಕ್ಯಾಂಪ್ಕೋದ ಅಧ್ಯಕ್ಷರಾದ ಎಸ್. ಆರ್. ಸತೀಶ್ಚಂದ್ರರವರು ಇತ್ತೀಚೆಗೆ ಅವಘಡದಲ್ಲಿ ಮರಣ ಹೊಂದಿದ ಕ್ಯಾಂಪ್ಕೋದ ಸಕ್ರಿಯ ಸದಸ್ಯರಾದ ಗೋಪಾಲ ಶೆಟ್ಟಿ, ಬಾರೆಕಿನಡೆ ಮನೆ, ವಾಮದಪದವು ಇವರ ಮನೆಗೆ ಭೇಟಿ ನೀಡಿ ಕ್ಯಾಂಪ್ಕೋ ಸಂಸ್ಥೆಯಿಂದ ನೀಡಲಾಗುವ ಸಹಾಯ ಧನ ರೂಪಾಯಿ 50000/- ದ ಚೆಕ್ಕನ್ನು ಗೋಪಾಲ ಶೆಟ್ಟಿಯವರ ಪತ್ನಿ ಗಿರಿಜಾ ಶೆಟ್ಟಿ ಇವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕ ರಾದ ಬಿ. ತಿಮ್ಮಪ್ಪ ಶೆಟ್ಟಿ, ಪುತ್ತೂರು ಪ್ರಾದೇಶಿಕ ಕಚೇರಿಯ ಹಿರಿಯ ಪ್ರಬಂಧಕರಾದ ಗೋವಿಂದ ಭಟ್, ವಾಮದಪದವು ಶಾಖೆಯ ಪುರುಷೋತ್ತಮ.ಕೆ, ವಾಮದ ಪದವು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಯಶೋಧರ ಶೆಟ್ಟಿ, ಉಪಾಧ್ಯಕ್ಷರಾದ ಗಣನಾಥ ಶೆಟ್ಟಿ, ಕಾರ್ಯದರ್ಶಿಗಳಾದ ಅಲ್ಬರ್ಟ್ ಡಿಸೋಜಾ, ಸಹಕಾರಿ ಸಂಘದ ನಿರ್ದೇಶಕರುಗಳಾದ ಕಮಲ್ ಶೆಟ್ಟಿ, ಹಿರಿಯ ಸದಸ್ಯ ಬೆಳೆಗಾರರಾದ ಸುಬ್ಬಣ್ಣ ಶಾಸ್ತ್ರೀ, ಗೋಪಾಲಕೃಷ್ಣ ಚೌಟ,
ಲಕ್ಷ್ಮೀನಾರಾಯಣ ಪರಾಡ್ಕರ್,ಪುರುಷೋತ್ತಮ ಶೆಟ್ಟಿ ಬಾರಕ್ಕಿನಡೆ,ವೆಂಕಟೇಶ್ ಭಟ್,ವಿಜಯ ರೈ,ಸುಧಿರ್ ಶೆಟ್ಟಿ ಕುಂಡೋಳಿ,ದಿನೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
